alex Certify ‘ಬೆಳ್ಳಿ-ಬಂಗಾರ’ ಮನೆಯಲ್ಲಿಡುವುದರಿಂದಾಗುವ ಲಾಭ ಏನು ಗೊತ್ತಾ……? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಬೆಳ್ಳಿ-ಬಂಗಾರ’ ಮನೆಯಲ್ಲಿಡುವುದರಿಂದಾಗುವ ಲಾಭ ಏನು ಗೊತ್ತಾ……?

ಹಿಂದೂ ಧರ್ಮದಲ್ಲಿ ದೇವಾನುದೇವತೆಗಳ ಪೂಜೆ ಜೊತೆ ಅವ್ರ ಮೂರ್ತಿಗಳನ್ನಿಡುವುದು ಶುಭವೆಂದು ಪರಿಗಣಿಸಲಾಗಿದೆ. ಪ್ರಾಚೀನ ಕಾಲದಿಂದಲೂ ಜನರು ತಮ್ಮ ಮನೆಗಳಲ್ಲಿ ದೇವರ ಮೂರ್ತಿಗಳನ್ನು ಇಡುತ್ತ ಬಂದಿದ್ದಾರೆ. ಹಿಂದೂ ಧರ್ಮದಲ್ಲಿ ಭಗವಂತನ ಚಿನ್ನ ಅಥವಾ ಬೆಳ್ಳಿ ಮೂರ್ತಿ ಇಡುವುದನ್ನು ಮಂಗಳಕರವೆಂದು ನಂಬಲಾಗಿದೆ. ಮನೆಯಲ್ಲಿ ಬಂಗಾರ ಅಥವಾ ಬೆಳ್ಳಿ ಮೂರ್ತಿ ಇರಬೇಕೆಂಬುದು ಅನೇಕರಿಗೆ ಗೊತ್ತು. ಆದ್ರೆ ಏಕೆ ಎಂಬ ಪ್ರಶ್ನೆಗೆ ಎಲ್ಲರ ಬಳಿ ಉತ್ತರವಿಲ್ಲ.

ಚಿನ್ನ ಹಾಗೂ ಬೆಳ್ಳಿ ಈ ಎರಡೂ ಧಾತುವಿಗೂ ಬೇರೆ ಬೇರೆ ಮಹತ್ವವಿದೆ. ಮನೆಯಲ್ಲಿ ಬಂಗಾರದ ಮೂರ್ತಿ ಇಡುವುದ್ರಿಂದ ಕುಟುಂಬಸ್ಥರ ದೌರ್ಬಲ್ಯ ಕಡಿಮೆಯಾಗುತ್ತದೆಯಂತೆ. ಬಂಗಾರ ದುಬಾರಿಯಾದ ಕಾರಣ ಜನಸಾಮಾನ್ಯರಿಗೆ ಬಂಗಾರದ ಮೂರ್ತಿ ಖರೀದಿ ಕಷ್ಟ. ಹಾಗಾಗಿ ಅಂತವರು ಬೆಳ್ಳಿ ಮೂರ್ತಿಯನ್ನು ಖರೀದಿ ಮಾಡಬಹುದು ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ.

ಬೇರೆ ರಾಶಿಗಳಿಗೆ ಹೋಲಿಕೆ ಮಾಡಿದ್ರೆ ಬೆಳ್ಳಿ ಪ್ರಬಲಶಾಲಿ. ಮನೆಯಲ್ಲಿ ಬಂಗಾರ-ಬೆಳ್ಳಿಯ ಪಾತ್ರೆಗಳನ್ನೂ ಇಡಲಾಗುತ್ತದೆ. ಬೆಳ್ಳಿ ಪಾತ್ರೆ ಮನೆ ವಾತಾವರಣವನ್ನು ಮಂಗಳಕರವಾಗಿರಿಸುತ್ತದೆ. ಬೆಳ್ಳಿ ಪಾತ್ರೆಯಲ್ಲಿ ಆಹಾರ ಸೇವನೆ ಮಾಡಿದ್ರೆ ಶಕ್ತಿ ಹೆಚ್ಚುತ್ತದೆ ಎಂದು ನಂಬಲಾಗಿದೆ. ಮನೆಯಲ್ಲಿ ತಾಮ್ರದ ಪಾತ್ರೆಯನ್ನೂ ಬಳಸುತ್ತಾರೆ. ಕಬ್ಬಿಣ ಹಾಗೂ ಪ್ಲಾಸ್ಟಿಕ್ ಪಾತ್ರೆಗಳನ್ನು ಬಳಸಬಾರದು.

ಬೆಳ್ಳಿ ಈಶ್ವರನ ಕಣ್ಣುಗಳಿಂದ ಹುಟ್ಟಿದೆಯಂತೆ. ಯಾರ ಮನೆಯಲ್ಲಿ ಬೆಳ್ಳಿ ಇರುತ್ತದೆಯೋ ಆ ಮನೆಯಲ್ಲಿ ಸಂತೋಷ, ಸಮೃದ್ಧಿ ನೆಲೆಸಿರುತ್ತದೆಯಂತೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬೆಳ್ಳಿ ಬಳಕೆ ಮಾಡುವುದ್ರಿಂದ ಬುದ್ದಿಯಲ್ಲಿ ವೃದ್ಧಿಯಾಗುತ್ತದೆ. ಮನಸ್ಸು ಸಮತೋಲನದಲ್ಲಿರುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...