ಅಡುಗೆ ಮನೆಯಲ್ಲಿರುವ ಬೆಳ್ಳುಳ್ಳಿ ಸಾಕಷ್ಟು ಔಷಧಿ ಗುಣಗಳನ್ನು ಹೊಂದಿದೆ. ಕಡಿಮೆ ಕ್ಯಾಲೋರಿಯ ಬೆಳ್ಳುಳ್ಳಿಯಲ್ಲಿ ಪ್ರೋಟೀನ್, ವಿಟಮಿನ್ ಸಿ, ಎ ಮತ್ತು ಬಿ, ಮೆಗ್ನೀಸಿಯಮ್, ಕ್ಯಾಲ್ಸಿಯಂ, ಜಿಂಕ್ ಅಂಶವಿರುತ್ತದೆ.
ಕ್ಯಾನ್ಸರ್ ವಿರೋಧಿ ಗುಣವನ್ನು ಬೆಳ್ಳುಳ್ಳಿ ಹೊಂದಿದೆ. ಹೃದಯ ಸಂಬಂಧಿ ಖಾಯಿಲೆಗೆ ಒಳ್ಳೆಯ ಮನೆ ಮದ್ದಾಗಿರುವ ಬೆಳ್ಳುಳ್ಳಿಯನ್ನು ರಾತ್ರಿ ಮಲಗುವ ಮೊದಲು ತಿನ್ನುವುದ್ರಿಂದ ಸಾಕಷ್ಟು ಪ್ರಯೋಜನಗಳಿವೆ.
ರಾತ್ರಿ ಮಲಗುವ ಮೊದಲು ಹುರಿದ ಬೆಳ್ಳುಳ್ಳಿ ತಿಂದ್ರೆ ಹೆಚ್ಚುತ್ತಿರುವ ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಬರುತ್ತದೆ. ಇದ್ರಿಂದ ಹೃದಯ ಯಾವಾಗ್ಲೂ ಆರೋಗ್ಯವಾಗಿರುತ್ತದೆ.
ರಾತ್ರಿ ಮಲಗುವ ಮೊದಲು ಹುರಿದ ಬೆಳ್ಳುಳ್ಳಿ ಸೇವನೆಯಿಂದ ದೇಹದಲ್ಲಿರುವ ವಿಷಕಾರಿ ವಸ್ತುಗಳು ಮೂತ್ರದ ಮೂಲಕ ಹೊರಗೆ ಹೋಗುತ್ತವೆ.
ತೂಕ ಕಡಿಮೆ ಮಾಡಿಕೊಳ್ಳುವ ಇಚ್ಛೆಯುಳ್ಳವರು ರಾತ್ರಿ ಮಲಗುವ ಮೊದಲು ಹುರಿದ ಬೆಳ್ಳುಳ್ಳಿಯನ್ನು ಸೇವನೆ ಮಾಡಿ.
ಹುರಿದ ಬೆಳ್ಳುಳ್ಳಿ ಸೇವನೆಯಿಂದ ಎಲುಬುಗಳು ಬಲ ಪಡೆಯುತ್ತವೆ.
ದೇಹ ಬಳಲಿದ್ದರೆ, ದುರ್ಬಲವಾಗಿದ್ದರೆ ಮಲಗುವ ಮೊದಲು ಬೆಳ್ಳುಳ್ಳಿ ಸೇವನೆ ಮಾಡಿದ್ರೆ ಸುಧಾರಣೆ ಕಾಣಲಿದೆ.
ಉಸಿರಾಟದ ಸಮಸ್ಯೆಯಿದ್ದವರು ರಾತ್ರಿ ಮಲಗುವ ಮೊದಲು ಹುರಿದ ಬೆಳ್ಳುಳ್ಳಿ ಸೇವನೆ ಮಾಡಬೇಕು.