alex Certify ‘ಅಂಜೂರ’ ತಿನ್ನುವುದರಿಂದಾಗುವ ಉಪಯೋಗ ಗೊತ್ತಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಅಂಜೂರ’ ತಿನ್ನುವುದರಿಂದಾಗುವ ಉಪಯೋಗ ಗೊತ್ತಾ….?

ಅಂಜೂರ ಹಣ್ಣು ತುಂಬಾ ತಂಪು. ಇದು ಕಫನಾಶಕ ಮತ್ತು ರಕ್ತಪಿತ್ತನಾಶಕ. ಶ್ವಾಸಕೋಶದಲ್ಲಿ ಸೇರಿಕೊಂಡಿರುವ ಕಫವನ್ನು ಕರಗಿಸಿ ಹೊರ ಬರುವಂತೆ ಮಾಡುತ್ತದೆ.

ಮೂಲ ವ್ಯಾಧಿ, ಮೂತ್ರಕೋಶದಲ್ಲಿ ಕಲ್ಲು ಮುಂತಾದ ವ್ಯಾಧಿಗಳಿಗೆ ಇದು ಪರಿಣಾಮಕಾರಿ. ಅದಲ್ಲದೇ ಇದರ ಇನ್ನೂ ಕೆಲವು ಪ್ರಯೋಜನಗಳನ್ನು ತಿಳಿಯೋಣ.

* ಮಕ್ಕಳು ಗಾಜಿನ ತುಂಡು, ಪಿನ್ನು ಮುಂತಾದವುಗಳನ್ನು ನುಂಗಿದ್ದರೆ, ಈ ಹಣ್ಣನ್ನು ತಿನ್ನಿಸಿದರೆ ಅದು ಮಲದಲ್ಲಿ ಹೊರಹೋಗುತ್ತದೆ.

* 2-3 ಹಣ್ಣುಗಳನ್ನು ದಿನನಿತ್ಯವೂ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಕೆಲ ದಿನಗಳಲ್ಲಿ ಮಲಬದ್ಧತೆ ದೂರವಾಗುತ್ತದೆ.

 * 5-6 ಹಣ್ಣುಗಳನ್ನು ಒಣದ್ರಾಕ್ಷಿಗಳೊಂದಿಗೆ ಒಂದು ಲೋಟ ಹಾಲಿನಲ್ಲಿ ಹಾಕಿ ಬೇಯಿಸಿ ಆ ಹಾಲನ್ನು ಕುಡಿಯುವುದರಿಂದ ರಕ್ತ ಶುದ್ಧಿಯಾಗಿ ರಕ್ತ ವೃದ್ಧಿಯಾಗುತ್ತದೆ.

* ಅಂಜೂರದ ರಸವನ್ನು ಸೇವಿಸುವುದರಿಂದ ಉಷ್ಣ ಪೀಡತೆಯಿಂದ ಮುಕ್ತಿ ಹೊಂದಬಹುದು.

* ಶ್ವಾಶಕೋಶದ ತೊಂದರೆಯಿರುವವರು 5 ಅಂಜೂರವನ್ನು ಅರ್ಧ ಲೀಟರ್ ನೀರಿನಲ್ಲಿ ಹಾಕಿ ಕಾಯಿಸಿ ನಂತರ ಆರಿಸಿ ಇಟ್ಟುಕೊಂಡು ಬೆಳಗ್ಗೆ-ಸಂಜೆ ಸೇವಿಸುವುದರಿಂದ ಸಮಸ್ಯೆ ದೂರವಾಗುತ್ತವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...