ಅಡುಗೆ ಸೋಡಾ ಬಗ್ಗೆ ನಿಮಗೆ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಸಾಮಾನ್ಯವಾಗಿ ಎಲ್ಲರೂ ಅಡುಗೆಗೆ ಇದನ್ನು ಉಪಯೋಗಿಸ್ತಾರೆ. ಕುಕೀಸ್, ದೋಸೆಗೆ ಇದನ್ನು ಬಳಸ್ತಾರೆ.
ಅಡುಗೆ ಸೋಡಾ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದನ್ನು ಸೇವಿಸುವುದರಿಂದ ಸಾಕಷ್ಟು ಕಾಯಿಲೆಗಳು ದೂರವಾಗುತ್ತವೆ.
ನಿಮಗೆ ಆಮ್ಲದ ಸಮಸ್ಯೆ ಇದ್ದರೆ ಜೀರ್ಣಕ್ರಿಯೆ ಸರಿಯಾಗಿ ಆಗುವುದಿಲ್ಲ. ಆಗ ಅಡುಗೆ ಸೋಡಾ ಬೆರೆಸಿದ ನೀರನ್ನು ಕುಡಿದ್ರೆ ಒಳ್ಳೆಯದು.
ವಾಯು ಸಮಸ್ಯೆಗೂ ಇದು ಉತ್ತಮ ಮದ್ದು. ಹೊಟೇಲ್ ತಿಂಡಿ ಸೇವಿಸಿದ ನಂತ್ರ ಹೊಟ್ಟೆಯಲ್ಲಿ ವಾಯು ತುಂಬಿಕೊಂಡ ಅನುಭವವಾಗುತ್ತದೆ. ಆಗ ಅಡುಗೆ ಸೋಡಾ ಬೆರೆಸಿದ ನೀರನ್ನು ಕುಡಿಯಬೇಕು.
ಮೂತ್ರಪಿಂಡದಲ್ಲಿ ಬೆಳೆಯುವ ಕಲ್ಲನ್ನು ತೊಡೆದುಹಾಕಲು ಇದು ಸಹಕಾರಿ. ದೇಹದಲ್ಲಿ ಆಮ್ಲದ ಪ್ರಮಾಣ ಜಾಸ್ತಿಯಾದಾಗ ಮೂತ್ರದಲ್ಲಿ ಕಲ್ಲು ಕಾಣಿಸಿಕೊಳ್ಳುತ್ತದೆ. ಸೋಡಾ ನೀರು ದೇಹದಲ್ಲಿ ಆಮ್ಲದ ಪ್ರಮಾಣವನ್ನು ಸಮತೋಲನದಲ್ಲಿಟ್ಟು ಸಮಸ್ಯೆಗೆ ಪರಿಹಾರ ನೀಡುತ್ತದೆ.
ಆಮ್ಲದ ಪ್ರಮಾಣ ಹೆಚ್ಚಾದಾಗ ಚರ್ಮ ಸಮಸ್ಯೆ ಹಾಗೂ ಸೋಂಕು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಇದಕ್ಕೆ ಅಡುಗೆ ಸೋಡಾ ನೀರು ಒಳ್ಳೆಯ ಔಷಧಿ.
ಆಗಾಗ ಮೂತ್ರ ಮಾಡಬೇಕೆನ್ನಿಸಿದ್ರೆ ಇಲ್ಲವೆ ಯೂರಿನ್ ನಲ್ಲಿ ಸೋಂಕು ಕಾಣಿಸಿಕೊಂಡರೆ ತಕ್ಷಣ ಸೋಡಾ ನೀರು ಕುಡಿಯಿರಿ.
ಸೋಂಕಿನ ಕಾರಣದಿಂದ ಗಂಟಲಿನಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಈ ವೇಳೆ ಸೋಡಾ ನೀರು ಲಾಭದಾಯಕ. ನೋವನ್ನು ಹುಟ್ಟು ಹಾಕುವ ಆಮ್ಲವನ್ನು ಇದು ಕಡಿಮೆ ಮಾಡುತ್ತದೆ.