ಅಡಿಕೆಯನ್ನು ಹೆಚ್ಚಾಗಿ ಶುಭಕಾರ್ಯಗಳಲ್ಲಿ ಬಳಸುತ್ತಾರೆ. ಹಾಗೇ ಕೆಲವರು ಇದನ್ನು ವೀಳ್ಯದೆಲೆಯ ಜೊತೆ ಸೇವಿಸುತ್ತಾರೆ. ಇದು ಹಲವು ಔಷಧೀಯ ಗುಣಗಳನ್ನು ಹೊಂದಿದೆ. ಇದನ್ನು ಸೇವಿಸುವುದರಿಂದ ಆರೋಗ್ಯಕ್ಕೆ ತುಂಬಾ ಉತ್ತಮ.
*ತುಟಿ ಮತ್ತು ಬಾಯಿಯಲ್ಲಿ ಗುಳ್ಳೆಗಳಾಗಿದ್ದರೆ ದಿನಕ್ಕೆ 2 ಬಾರಿ ಅಡಿಕೆಯನ್ನು ಸೇವಿಸಿ. ಇದರಿಂದ ಶೀಘ್ರದಲ್ಲಿಯೇ ಈ ಸಮಸ್ಯೆ ನಿವಾರಣೆಯಾಗುತ್ತದೆ.
*ಅಡಿಕೆ ಸೇವಿಸುವುದರಿಂದ ಹಲ್ಲುಗಳ ಮೇಲಿರುವ ಹಳದಿ ಬಣ್ಣದ ಪಾಚಿ ನಿವಾರಣೆಯಾಗುತ್ತದೆ. ಇದರಿಂದ ಹಲ್ಲುಗಳು ಬಲವಾಗುತ್ತವೆ. ಇದು ಹಲ್ಲು ನೋವನ್ನು ನಿವಾರಿಸುತ್ತದೆ.
ಮಲಬದ್ಧತೆ ತೊಂದರೆ ಇರುವವರು ಅಡಿಕೆಯನ್ನು ತಿನ್ನುವುದರಿಂದ ಈ ಸಮಸ್ಯೆ ನಿವಾರಣೆಯಾಗುತ್ತದೆ. ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುತ್ತವೆ.
*ನೀವು ಬೆನ್ನು ನೋವಿನಿಂದ ಬಳಲುತ್ತಿದ್ದರೆ ಅಡಿಕೆಯನ್ನು ಸೇವಿಸಬಹುದು. ಇದರಲ್ಲಿ ಔಷಧೀಯ ಗುಣಗಳು ಸಮೃದ್ಧವಾಗಿದ್ದು, ಇದು ಬೆನ್ನು ನೋವು, ಕೀಲು ನೋವು ಮತ್ತು ತಲೆನೋವನ್ನು ತ್ವರಿತವಾಗಿ ಪರಿಹರಿಸುತ್ತದೆ.