ಶ್ರೀಮಂತ ಆಹಾರ ಎಂದು ಅಡ್ಡ ಹೆಸರು ಪಡೆದಿರುವ ತುಪ್ಪ ಸೇವಿಸುವುದರಿಂದ ದೇಹದಲ್ಲಿ ಕೊಬ್ಬಿನ ಅಂಶ ಹೆಚ್ಚಾಗಿ ದೇಹ ತೂಕ ಹೆಚ್ಚುತ್ತದೆ ಎಂಬ ತಪ್ಪು ಕಲ್ಪನೆ ಮನೆ ಮಾಡಿದೆ. ರುಚಿಗೆ ಮಾತ್ರವಲ್ಲದೆ ಅನೇಕ ಔಷಧೀಯ ಮತ್ತು ಸೌಂದರ್ಯ ವರ್ಧಕ ಗುಣಗಳನ್ನೂ ಇದು ಹೊಂದಿದೆ.
ಹಾಗಾಗಿ ತುಪ್ಪವು ಹಾಲಿನಷ್ಟೇ ಆರೋಗ್ಯಕರ. ಪ್ರತಿ ನಿತ್ಯದ ಆಹಾರದಲ್ಲಿ ತುಪ್ಪ ಸೇವಿಸುವ ವ್ಯಕ್ತಿಗಳು ಚುರುಕಾಗಿರುತ್ತಾರೆ. ರಾತ್ರಿ ಮಲಗುವ ಮುನ್ನ ಒಂದು ಲೋಟ ಬಿಸಿ ಹಾಲಿಗೆ ಒಂದು ಅಥವಾ ಎರಡು ಚಿಕ್ಕ ಚಮಚ ತುಪ್ಪ ಬೆರೆಸಿ ತಿಂದರೆ ಜೀರ್ಣ ಕ್ರಿಯೆ ಸುಲಭವಾಗುತ್ತದೆ. ಮಲಬದ್ದತೆ, ಮೂಲವ್ಯಾಧಿ ಸಮಸ್ಯೆಯನ್ನು ದೂರ ಮಾಡುತ್ತದೆ.
ಬ್ಯುಟಿರಿಕ್ ಅಂಶವು ಕರಳುಗಳನ್ನು ಸ್ವಚ್ಛಗೊಳಿಸಿ ಆಹಾರದಲ್ಲಿ ಇರುವ ಪೋಷಕಾಂಶಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಮೂಗು ಕಟ್ಟಿ ಉಸಿರಾಡಲು ಕಷ್ಟವಾದರೆ ತುಪ್ಪವನ್ನು ಉಗುರು ಬೆಚ್ಚಗೆ ಬಿಸಿ ಮಾಡಿ ಬೆಳಗ್ಗೆ ಎದ್ದ ತಕ್ಷಣ ಎರಡು ಅಥವಾ ಮೂರು ಹನಿ ಮೂಗಿಗೆ ಹಾಕಿಕೊಳ್ಳಿ. ಇದರಿಂದ ಉಸಿರಾಟ ಸರಾಗವಾಗುತ್ತದೆ.