ನಿತ್ಯ ರಾತ್ರಿ ಮಲಗುವ ಮುನ್ನ ಒಂದು ಏಲಕ್ಕಿ ತಿನ್ನುವುದರಿಂದ ಯಾವೆಲ್ಲ ಪ್ರಯೋಜನಗಳನ್ನು ಪಡೆಯಬಹುದು ಎಂಬುದು ನಿಮಗೆ ಗೊತ್ತೇ?
ಮಸಾಲೆ ಪದಾರ್ಥಗಳಲ್ಲಿ ಬಳಕೆಯಾಗುವ ಏಲಕ್ಕಿಯಲ್ಲಿ ಹಲವು ಔಷಧೀಯ ಗುಣಗಳಿವೆ. ಸಣ್ಣ ಕಾಳು ಏಲಕ್ಕಿ ವಾಂತಿ ಅಥವಾ ವಾಕರಿಕೆಯ ಲಕ್ಷಣಗಳನ್ನು ದೂರಮಾಡುತ್ತದೆ. ಪ್ರಯಾಣ ಮಾಡುವಾಗ ಕಾಡುವ ವಾಕರಿಕೆ ಸಮಸ್ಯೆಗೂ ಇದು ಅತ್ಯುತ್ತಮ ಔಷಧ.
ಒಂದು ಸಣ್ಣ ಕಾಳನ್ನು ಬಾಯಿಯಲ್ಲಿ ಹಾಕಿ ಜಗಿಯುವುದರಿಂದ ಬಾಯಿಯ ದುರ್ವಾಸನೆ ದೂರವಾಗುತ್ತದೆ. ಇದನ್ನು ನಿಮ್ಮ ಪಾಕೆಟ್ ನಲ್ಲಿ ಇಟ್ಟುಕೊಂಡು ಬೇಕಾದಾಗ ಬಾಯಿಗೆ ಹಾಕಿಕೊಳ್ಳಬಹುದು.
ಮಲಬದ್ಧತೆ ಸಮಸ್ಯೆಯನ್ನು ದೂರಮಾಡುತ್ತದೆ. ಇದು ಜೀರ್ಣಕ್ರಿಯೆಯನ್ನು ಚುರುಕುಗೊಳಿಸಿ ನಿಮ್ಮ ಹೊಟ್ಟೆಯ ಸಮಸ್ಯೆಗಳನ್ನು ದೂರಮಾಡುತ್ತದೆ. ಗ್ಯಾಸ್ಟ್ರಿಕ್ ಸಮಸ್ಯೆಯನ್ನೂ ದೂರಮಾಡುತ್ತದೆ.
ಅಸ್ತಮಾ ರೋಗ ಇರುವವರು ಚಳಿಗಾಲದಲ್ಲಿ ಒಂದೆರಡು ಕಾಳು ಏಲಕ್ಕಿಯನ್ನು ಬಾಯಿಯಲ್ಲಿ ಹಾಕಿ ಇಟ್ಟುಕೊಳ್ಳಿ. ಇದರಿಂದ ಶ್ವಾಸಕೋಶದ ಸಮಸ್ಯೆ ಮತ್ತು ಅಸ್ತಮಾ ಸಮಸ್ಯೆ ದೂರವಾಗುತ್ತದೆ.