ಋತುಮಾನಕ್ಕೆ ಅನುಗುಣವಾಗಿ ನಾವೆಲ್ಲ ಬಿಸಿ ಅಥವಾ ತಣ್ಣೀರಿನಿಂದ ಸ್ನಾನ ಮಾಡ್ತೇವೆ. ಆದರೆ ಉಪ್ಪು ನೀರಿನಲ್ಲಿ ಸ್ನಾನ ಮಾಡಿದ್ರೆ ಅನೇಕ ಸಮಸ್ಯೆಗಳು ದೂರವಾಗುತ್ತವೆ. ಉಪ್ಪು ನೀರಿನ ಸ್ನಾನ ಮಾಡುವುದರಿಂದ ಕೀಲು ನೋವು ನಿವಾರಣೆಯಾಗುತ್ತದೆ, ಜೊತೆಗೆ ಒತ್ತಡವನ್ನು ಕಡಿಮೆ ಮಾಡುತ್ತದೆ. ಇದರ ಹೊರತಾಗಿ ಉಪ್ಪು ನೀರಿನಿಂದ ಸ್ನಾನ ಮಾಡುವುದರಿಂದ ಆಗುವ ಲಾಭಗಳೇನು ಎಂಬುದನ್ನು ತಿಳಿಯೋಣ.
ಉಪ್ಪು ನೀರು ಕೀಲು ನೋವನ್ನು ಕಡಿಮೆ ಮಾಡುತ್ತದೆ. ಸ್ನಾನ ಮಾಡುವಾಗ ನೀರಿಗೆ ಚಿಟಿಕೆ ಉಪ್ಪು ಹಾಕಿದರೆ ಮೂಳೆಗಳಲ್ಲಿನ ಸಣ್ಣಪುಟ್ಟ ನೋವುಗಳು ಮಾಯವಾಗುತ್ತವೆ. ಇದಲ್ಲದೆ, ನಿಮ್ಮ ಪಾದಗಳಲ್ಲಿ ತುಂಬಾ ನೋವಿದ್ದರೆ, ಉಗುರು ಬೆಚ್ಚಗಿನ ಉಪ್ಪು ನೀರಿನಲ್ಲಿ ಸ್ವಲ್ಪ ಹೊತ್ತು ಪಾದವನ್ನು ಅದ್ದಿ ಕುಳಿತುಕೊಳ್ಳಿ.
ಯಾವುದೇ ರೀತಿಯ ಸೋಂಕನ್ನು ತಡೆಗಟ್ಟಲು ಸಹ ಉಪ್ಪು ನೀರು ಸಹಾಯ ಮಾಡುತ್ತದೆ. ಉಪ್ಪಿನಲ್ಲಿರುವ ಖನಿಜಗಳು ಅನೇಕ ರೀತಿಯ ಸೋಂಕುಗಳಿಂದ ರಕ್ಷಿಸುತ್ತವೆ. ಉಪ್ಪು ನೀರಿನ ಸ್ನಾನದ ನಂತರ ದೇಹದ ಎಲ್ಲಾ ರಂಧ್ರಗಳು ತೆರೆದುಕೊಳ್ಳುತ್ತವೆ. ಯಾವುದೇ ರೀತಿಯ ಇನ್ಫೆಕ್ಷನ್ ಆಗಂತೆ ಇದು ತಡೆಗಟ್ಟುತ್ತದೆ.
ಮೊಡವೆಗಳನ್ನು ಹೋಗಲಾಡಿಸಲು ಉಪ್ಪು ನೀರು ಪ್ರಯೋಜನಕಾರಿಯಾಗಿದೆ. ಉಪ್ಪು ನೀರಿನಿಂದ ಸ್ನಾನ ಮಾಡುವುದರಿಂದ ಚರ್ಮದ ರಂಧ್ರಗಳು ತೆರೆದುಕೊಳ್ಳುತ್ತವೆ, ಹಾಗಾಗಿ ದೇಹದ ಕೊಳಕು ಸುಲಭವಾಗಿ ಹೊರಬರುತ್ತದೆ. ಈ ರೀತಿಯಾಗಿ ದೇಹದ ನಿರ್ವಿಶೀಕರಣವಾಗುವುದರಿಂದ ಮುಖದ ಕಲೆಗಳು ಮತ್ತು ಮೊಡವೆಗಳು ಕಡಿಮೆಯಾಗುತ್ತವೆ. ಉಪ್ಪು ನೀರು ತ್ವಚೆಯನ್ನು ಹೈಡ್ರೇಟ್ ಮಾಡಲು ಸಹ ಉಪಯುಕ್ತವಾಗಿದೆ.
ನೀವು ಯಾವುದಾದರೂ ವಿಚಾರಕ್ಕೆ ಸಂಬಂಧಪಟ್ಟಂತೆ ಹೆಚ್ಚು ಒತ್ತಡ ಅನುಭವಿಸುತ್ತಿದ್ದರೆ ಉಪ್ಪು ನೀರಿನಿಂದ ಸ್ನಾನ ಮಾಡಬೇಕು. ಇದರಿಂದ ಖಂಡಿತವಾಗಿಯೂ ಪ್ರಯೋಜನ ಸಿಗುತ್ತದೆ. ಉಪ್ಪು ನೀರಿನಿಂದ ಸ್ನಾನ ಮಾಡಿದ ನಂತರ ಖನಿಜಗಳೆಲ್ಲ ದೇಹದಲ್ಲಿ ಹೀರಲ್ಪಡುತ್ತವೆ. ಸೋಡಿಯಂ ಮೆದುಳಿನ ಮೇಲೂ ಪರಿಣಾಮ ಬೀರುತ್ತದೆ. ಇದಲ್ಲದೆ, ದೇಹವನ್ನು ಡಿಟಾಕ್ಸ್ ಮಾಡಿದಾಗ ಒತ್ತಡವು ಬಿಡುಗಡೆಯಾಗುತ್ತದೆ. ಇದು ಮೆದುಳಿನ ಮೇಲೆ ನೇರ ಪರಿಣಾಮ ಬೀರುವುದರಿಂದ ನೀವು ರಿಲ್ಯಾಕ್ಸ್ ಆಗುತ್ತೀರಿ.