ಅಳಲೆಮರ ಕಾಂಬ್ರೇಡೆಸಿಯೇ ಕುಟುಂಬಕ್ಕೆ ಸೇರಿದ ಮರ. ಆಂಗ್ಲಭಾಷೆಯಲ್ಲಿ ಬ್ಲ್ಯಾಕ್ ಚಬುಲಿಕ್, ಮೈರೋಬೆಲೆನ್, ಗಲ್ ನಟ್ ಇತ್ಯಾದಿ ಹೆಸರುಗಳಿವೆ.
ಕರುಳಿನ ತೊಂದರೆ, ಜಠರದ ಸಮಸ್ಯೆ, ಅಜೀರ್ಣ, ಮಧುಮೇಹ, ರಕ್ತದೊತ್ತಡ, ಅಸ್ತಮಾ, ಹೃದ್ರೋಗಗಳು, ಎಚ್ಐವಿ ಮುಂತಾದ ಕಾಯಿಲೆಗಳಲ್ಲಿ ಅಳಲೆಕಾಯಿ ಮದ್ದು, ಅಳಲೆಕಾಯಿ ಸೇವನೆಯಿಂದ ನೆನಪಿನ ಶಕ್ತಿ ವೃದ್ಧಿ, ರಕ್ತಶುದ್ಧಿ, ನರವ್ಯವಸ್ಥೆಯ ರಕ್ಷಣೆ, ಜೀರ್ಣಕ್ರಿಯೆ ವೃದ್ಧಿಯಾಗಿ ಕರುಳಿನ ತೊಂದರೆಗಳಿಂದ ದೂರವಿರಿಸುತ್ತದೆ.
ಈ ಕಾಯಿಯಿಂದ ಎಣ್ಣೆಯನ್ನು ತಗೆಯಲಾಗುತ್ತದೆ. ಈ ಕಾಯಿಯನ್ನು ಆಗಾಗ ಸೇವಿಸುವುದು ಉತ್ತಮ. ಈ ಕಾಯಿಯನ್ನು ಔಷಧಿಯಾಗಿ ನೀಡುವಾಗ ವ್ಯಕ್ತಿಯ ದೇಹದ ಪ್ರಕೃತಿ ಹಾಗೂ ಸಮಸ್ಯೆಗಳಿಗೆ ಅನುಗುಣವಾಗಿ ಅಳಲೆಕಾಯಿ ನೀಡಲಾಗುತ್ತದೆ.
ಅಳಲೆಕಾಯಿಯ ಉತ್ಪನ್ನಗಳನ್ನು ವೈದ್ಯರ ಸಲಹೆಯ ಮೇರೆಗೆ ಬಳಸಬೇಕು. ಆಯುರ್ವೇದದ ಪ್ರಸಿದ್ಧ ಔಷಧಿಗಳಾದ ರಸಾಯನ ಹಾಗೂ ತ್ರಿಫಲಗಳಲ್ಲಿಯೂ ಈ ಕಾಯಿಯ ಚೂರ್ಣವನ್ನು ಬಳಸಲಾಗುತ್ತದೆ. ಮಧುಮೇಹಿಗಳು, ಗರ್ಭಿಣಿಯರು, ಸ್ತನ್ಯಪಾನ ಮಾಡಿಸುವ ಸ್ತ್ರೀಯರು ವೈದ್ಯರ ಸಲಹೆಯ ಹೊರತಾಗಿ ಬಳಸಬಾರದು.