
ಚೆಂಡು ಹೂವು ಅಥವಾ ಮಾರಿಗೋಲ್ಡ್ ಹೂವನ್ನು ಮನೆಯ ಅಲಂಕಾರಕ್ಕೆ ಬಳಸಿದ ಬಳಿಕ ಎಸೆಯದಿರಿ. ಅದನ್ನು ಸಂಗ್ರಹಿಸಿಡಿ. ಇದರಿಂದ ಹಲವು ಆರೋಗ್ಯದ ಲಾಭಗಳನ್ನು ಪಡೆಯಬಹುದು ಎಂಬುದು ನಿಮಗೆ ತಿಳಿದಿರಲಿ.
ಈ ಹೂವನ್ನು ತ್ವಚೆ ಅಲರ್ಜಿಗೆ ಹಾಗೂ ಕಜ್ಜಿಯಂಥ ಸಮಸ್ಯೆ ನಿವಾರಣೆಗೆ ಬಳಸಲಾಗುತ್ತದೆ. ಮೂತ್ರಪಿಂಡದ ಸಮಸ್ಯೆಗಳನ್ನು ದೂರಮಾಡುತ್ತದೆ. ಈ ಹೂವಿನ ಕಷಾಯವನ್ನು ತಯಾರಿಸಿ ಕುಡಿಯುವುದರಿಂದ ಮೂತ್ರಪಿಂಡದ ಕಲ್ಲು ಕರಗಿ ಹೋಗುತ್ತವೆ.
ಚೆಂಡು ಹೂವಿನಲ್ಲಿ ಆಂಟಿ ಬ್ಯಾಕ್ಟೀರಿಯಾ ಗುಣವಿದ್ದು ಮೊಡವೆಗಳನ್ನು ನಿವಾರಿಸುತ್ತದೆ. ಕಣ್ಣಿನ ನೋವು, ಬಾವು ಸಮಸ್ಯೆಗಳನ್ನೂ ಇದು ನಿವಾರಿಸುತ್ತದೆ.
ಇದರ ಹೂವಿನ ಕಷಾಯದಿಂದ ಬಾಯಿ ಮುಕ್ಕಳಿಸಿದರೆ ಹಲ್ಲು ನೋವು ಕಡಿಮೆಯಾಗುತ್ತದೆ. ಮಾರಿಗೋಲ್ಡ್ ಹೂವಿನ ಚಹಾ ಸೇವನೆಯಿಂದ ಅಲ್ಸರ್ ಹಾಗೂ ಹೊಟ್ಟೆಯೊಳಗಿನ ಗಾಯ ನಿವಾರಣೆಯಾಗುತ್ತದೆ. ಕೆಲವೊಮ್ಮೆ ಮೂಗಿನಿಂದ ರಕ್ತಸ್ರಾವವಾದರೆ ಅದ ನಿವಾರಣೆಗೂ ಈ ಹೂವಿನ ರಸವನ್ನು ಬಳಸಲಾಗುತ್ತದೆ.