
ಹವಾಮಾನ ಬದಲಾಗುತ್ತಿದ್ದಂತೆ ಅತಿ ಹೆಚ್ಚು ದುಷ್ಪರಿಣಾಮಕ್ಕೆ ಒಳಗಾಗುವ ದೇಹದ ಭಾಗಗಳಲ್ಲಿ ಕಣ್ಣು ಕೂಡಾ ಒಂದು. ಕಣ್ಣಿನ ಆರೈಕೆ ಬಗ್ಗೆ ಕಾಲಕಾಲಕ್ಕೆ ಕಾಳಜಿ ವಹಿಸುವುದು ಬಹಳ ಮುಖ್ಯ.
ಕಣ್ಣಿಗೆ ಅಲರ್ಜಿ ಸಮಸ್ಯೆ ಬಹುಬೇಗ ಕಾಡುತ್ತದೆ. ವೈರಸ್, ಬ್ಯಾಕ್ಟೀರಿಯಾಗಳಿಂದ ಈ ಅಲರ್ಜಿ ಕಾಣಿಸಿಕೊಳ್ಳಬಹುದು. ಹಾಗಾಗಿ ಬಿಸಿಲಿಗೆ ಅಥವಾ ಧೂಳು ಹೆಚ್ಚಿರುವ ಪ್ರದೇಶದಲ್ಲಿ ಓಡಾಡುವಾಗ ತಪ್ಪದೆ ಕೂಲಿಂಗ್ ಗ್ಲಾಸ್ ಧರಿಸಿ.
ವಾಹನಗಳಲ್ಲಿ ಓಡಾಡುವಾಗ ಅಂದರೆ ನೀವು ದ್ವಿಚಕ್ರ ವಾಹನಗಳಲ್ಲಿ ಪ್ರಯಾಣಿಸುವಾಗ ಬಿಸಿಲು ನೇರವಾಗಿ ಕಣ್ಣಿನ ಮೇಲೆ ಬೀಳದಂತೆ ಗ್ಲಾಸ್ ಧರಿಸಿ. ಕಣ್ಣನ್ನು ಮುಚ್ಚುವಂತೆ ಹೆಲ್ಮೆಟ್ ಗ್ಲಾಸ್ ಹಾಕಿಕೊಳ್ಳುವುದು ಮತ್ತೂ ಒಳ್ಳೆಯದು.
ಹೆಚ್ಚು ಹೊತ್ತು ಕಂಪ್ಯೂಟರ್ ಅಥವಾ ಮೊಬೈಲ್ ನೋಡುವುದು ಒಳ್ಳೆಯದಲ್ಲ. ಕನಿಷ್ಠ ಗಂಟೆಗೆ ಎರಡು ನಿಮಿಷವಾದರೂ ನಿಮ್ಮ ಕಣ್ಣಿಗೆ ರೆಸ್ಟ್ ನೀಡಿ. ಆ ಎರಡು ನಿಮಿಷ ಹೊರಗಿನ ಬಿಸಿಲನ್ನು ವೀಕ್ಷಿಸಿ. ಇಲ್ಲವೇ ಕಣ್ಣು ಮುಚ್ಚಿ ಕೂರಿ.
ಪ್ರತಿದಿನ ನಾಲ್ಕರಿಂದ ಐದು ಲೀಟರ್ ನೀರು ಕುಡಿಯುವುದರಿಂದ ಕಣ್ಣಿನ ಹೆಚ್ಚಿನ ಸಮಸ್ಯೆಗಳು ಸಹಜವಾಗಿಯೇ ದೂರವಾಗುತ್ತವೆ. ವಯಸ್ಸಾಗುತ್ತಿದ್ದಂತೆ ಕಾಡುವ ಕಣ್ಣಿನ ಪೊರೆ ಸಮಸ್ಯೆಗೆ ವೈದ್ಯರನ್ನು ಸಂಪರ್ಕಿಸುವುದೇ ಒಳ್ಳೆಯದು.