ಅತ್ತೆ-ಸೊಸೆ ನಡುವೆ ಗಲಾಟೆ ಮಾಮೂಲಿ. ಸಣ್ಣ-ಪುಟ್ಟ ವಿಷಯಕ್ಕೂ ಇಬ್ಬರ ನಡುವೆ ಜಗಳವಾಗ್ತಾ ಇದ್ದರೆ ಇದು ಇಬ್ಬರಿಗೂ ಒಳ್ಳೆಯದಲ್ಲ. ಮನೆಯಲ್ಲಿ ಸದಾ ಒತ್ತಡದ ವಾತಾವರಣ ನೆಲೆಸಿರುತ್ತದೆ. ಅನೇಕ ಬಾರಿ ಅತ್ತೆ-ಸೊಸೆ ಜಗಳ ಪತಿ-ಪತ್ನಿ ಸಂಬಂಧವನ್ನು ಹಾಳು ಮಾಡುತ್ತದೆ.
ಪತಿ-ಪತ್ನಿ ಬೇರೆಯಾಗಲೂ ಇದು ಕಾರಣವಾಗುತ್ತದೆ. ಹಾಗಾಗಿ ಸೊಸೆಯಾದವಳು ಕೆಲವೊಂದು ಪದ್ಧತಿಗಳನ್ನು ಅನುಸರಿಸಿದಲ್ಲಿ ಅತ್ತೆ-ಸೊಸೆ ಜಗಳವನ್ನು ತಪ್ಪಿಸಬಹುದು.
ಶಾಸ್ತ್ರದಂತೆ ಅತ್ತೆ-ಸೊಸೆ ನಡುವೆ ಸದಾ ಜಗಳವಾಗುತ್ತದೆ. ಸಣ್ಣ ಸಣ್ಣ ವಿಚಾರಕ್ಕೂ ಅತ್ತೆ ಮುನಿಸಿಕೊಳ್ಳುತ್ತಾಳೆಂದಾದಲ್ಲಿ ಸೊಸೆಯಾದವಳು ಒಂದು ಬೆಳ್ಳಿ ತುಣುಕನ್ನು ಇಟ್ಟುಕೊಳ್ಳಬೇಕು. ಇದು ಜಗಳ ಕಡಿಮೆ ಮಾಡುತ್ತದೆ.
ಹಣೆಗೆ ಕೇಸರಿ ಅಥವಾ ಅರಿಶಿನದ ಬಿಂದಿ ಇಟ್ಟುಕೊಳ್ಳಿ. ಇದು ಬಹಳ ಸರಳ ಹಾಗೂ ಪರಿಣಾಮಕಾರಿ ಉಪಾಯವಾಗಿದೆ.
ಅತ್ತೆಯನ್ನು ಖುಷಿಯಾಗಿಡಬೇಕು. ಆಕೆ ಸದಾ ಸಂತೋಷದಿಂದಿರಬೇಕೆನ್ನುವವರು ಬೆಳ್ಳಿ ಸರವನ್ನು ಕೊರಳಿಗೆ ಹಾಕಿಕೊಳ್ಳಿ.
ಮರೆತೂ ಬೇರೆ ವ್ಯಕ್ತಿಗಳಿಂದ ಬಿಳಿ ಬಣ್ಣದ ಬಟ್ಟೆಯನ್ನು ದಾನವಾಗಿ ಪಡೆಯಬೇಡಿ. ಹಾಗೆ ಬೆಳ್ಳಿಯಿಂದ ಮಾಡಿದ ಯಾವುದೇ ವಸ್ತುವನ್ನು ಪಡೆಯಬೇಡಿ.
ಮನೆಯಲ್ಲಿ ಪಾರಿವಾಳ ವಾಸಿಸದಂತೆ ನೋಡಿಕೊಳ್ಳಿ. ದೇವರ ಮನೆಯಲ್ಲಿ ದೊಡ್ಡ ಶಂಖ ಇಡುವುದರಿಂದಲೂ ಅತ್ತೆ-ಸೊಸೆ ಜಗಳ ಕಡಿಮೆಯಾಗುತ್ತದೆ.