ಮೊಟ್ಟೆ ಸೇವನೆಯಿಂದ ಆರೋಗ್ಯ ಕಾಪಾಡಿಕೊಳ್ಳಬಹುದು ಎಂಬುದೇನೋ ನಿಜ. ಅದರೆ ಅದನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸುವುದು ಅಷ್ಟೇ ಮುಖ್ಯ. ಇದರಿಂದ ನಮ್ಮ ದೇಹದಲ್ಲಿ ಪೌಷ್ಟಿಕಾಂಶವೂ ಹೆಚ್ಚುತ್ತದೆ.
ಮೊಟ್ಟೆಯ ಹಳದಿ ಭಾಗದಲ್ಲಿ ಮಾತ್ರ ಕೊಲೆಸ್ಟ್ರಾಲ್ ಇರುತ್ತದೆ. ಬಿಳಿ ಭಾಗ ಕೊಲೆಸ್ಟ್ರಾಲ್ ಮುಕ್ತವಾಗಿದೆ. ಐಸಿಎಂಅರ್ ಮತ್ತು ಎನ್ ಐಎನ್ ಮಾರ್ಗಸೂಚಿಗಳ ಪ್ರಕಾರ ದಿನ್ಕಕೆ 300 ಗ್ರಾಂ ಕೊಲೆಸ್ಟ್ರಾಲ್ ಸೇವಿಸಬಹುದು. ಅಂದರೆ ದಿನಕ್ಕೊಂದು ಮೊಟ್ಟೆ ತಿನ್ನಬಹುದು.
ಯುವಕರು ದೇಹಾರೋಗ್ಯ ಕಾಪಾಡಿಕೊಳ್ಳಲು ದಿನಕ್ಕೊಂದು ಮೊಟ್ಟೆ ಸೇವಿಸಬಹುದು. ಮಕ್ಕಳಿಗೂ ವಾರಕ್ಕೆರಡು ಮೊಟ್ಟೆ ತಿನ್ನಲು ಕೊಡಬಹುದು.
ಮೊಟ್ಟೆಯಿಂದ ನಮ್ಮ ದೇಹಕ್ಕೆ ಪೊಟಾಸಿಯಂ, ಮೆಗ್ನಿಷಿಯಂ, ಸೋಡಿಯಂ, ವಿಟಮಿನ್ ಎ, ಡಿ, ಬಿ6, ಸತು, ಕಬ್ಬಿಣಾಂಶ, ಗರ್ಭಿಣಿಯರಿಗೆ ಅತ್ಯಗತ್ಯವಾದ ಫೋಲಿಕ್ ಅಸಿಡ್ ಅನ್ನೂ ಒದಗಿಸುತ್ತದೆ.
ರಕ್ತದೊತ್ತಡ, ಪಾರ್ಶ್ವವಾಯು ಮೊದಲಾದ ಕಾಯಿಲೆಗಳನ್ನು ದೂರವಿಡುವ ಶಕ್ತಿಯೂ ಇದಕ್ಕಿದೆ. ಹಾಗಾದರೆ ತಡ ಯಾಕೆ, ನಿಯಮಿತವಾಗಿ ಮೊಟ್ಟೆ ಸೇವಿಸಿ, ಅರೋಗ್ಯ ಕಾಪಾಡಿಕೊಳ್ಳಿ.