alex Certify ಕರ್ಪೂರದಿಂದ ಕೂದಲಿನ ಸೌಂದರ್ಯ ಹೇಗೆ ಹೆಚ್ಚಿಸಿಕೊಳ್ಳುವುದು ಗೊತ್ತಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕರ್ಪೂರದಿಂದ ಕೂದಲಿನ ಸೌಂದರ್ಯ ಹೇಗೆ ಹೆಚ್ಚಿಸಿಕೊಳ್ಳುವುದು ಗೊತ್ತಾ….?

ಕರ್ಪೂರವನ್ನು ದೇವರ ಪೂಜೆಗೆ ಬಳಸುತ್ತಾರೆ. ದೇವರಿಗೆ ಆರತಿ ಬೆಳಗಲು ಕರ್ಪೂರ ಬಹಳ ಮುಖ್ಯ. ಆದರೆ ಈ ಕರ್ಪೂರದಿಂದ ನಮ್ಮ ಆರೋಗ್ಯ ಮತ್ತು ಸೌಂದರ್ಯವನ್ನು ವೃದ್ಧಿಗೊಳಿಸಬಹುದು. ಹಾಗಾದ್ರೆ ಕರ್ಪೂರದಿಂದ ಕೂದಲಿನ ಸೌಂದರ್ಯ ಹೆಚ್ಚಿಸಿಕೊಳ್ಳುವುದು ಹೇಗೆ ಎಂಬುದನ್ನು ತಿಳಿಯೋಣ.

*ಬಲಿಷ್ಠವಾದ ಕೂದಲನ್ನು ಪಡೆಯಲು ಕರ್ಪೂರದ ಎಣ್ಣೆ ಮತ್ತು ಹಸಿ ಮೊಟ್ಟೆಯನ್ನು ಸೇರಿಸಿ ಮಿಕ್ಸ್ ಮಾಡಿ ಕೂದಲಿನ ಬುಡಕ್ಕೆ ಹಚ್ಚಿ, 20 ನಿಮಿಷ ಬಿಟ್ಟು ಶಾಂಪುವಿನಿಂದ ಕೂದಲನ್ನು ತೊಳೆಯಿರಿ.

*ಉದ್ದವಾದ ಕೂದಲನ್ನು ಹೊಂದಲು ಕರ್ಪೂರಕ್ಕೆ ತೆಂಗಿನೆಣ್ಣೆಯನ್ನು ಸಮಾನ ಪ್ರಮಾಣದಲ್ಲಿ ಬೆರೆಸಿ ಕೂದಲಿನ ಬುಡಕ್ಕೆ ಹಚ್ಚಿ ಮಸಾಜ್ ಮಾಡಿ 30 ನಿಮಿಷ ಬಿಟ್ಟು ವಾಶ್ ಮಾಡಿ. ಇದು ಕೂದಲಿನ ಬೆಳವಣಿಗೆಗೆ ಸಹಕಾರಿಯಾಗಿದೆ.

*ಮೃದುವಾದ ಕೂದಲನ್ನು ಹೊಂದಲು ಕರ್ಪೂರದ ಎಣ್ಣೆಗೆ ಆಲಿವ್ ಎಣ್ಣೆಯನ್ನು ಮಿಕ್ಸ್ ಮಾಡಿ ಕೂದಲಿಗೆ ಹಚ್ಚಿ.

*ತಲೆ ಹೊಟ್ಟಯ ನಿವಾರಣೆಯಾಗಲು ಕರ್ಪೂರದ ಎಣ್ಣೆಯನ್ನು ತಲೆಗೆ ಹಚ್ಚಿ ಮಸಾಜ್ ಮಾಡಿ ಬಳಿಕ ವಾಶ್ ಮಾಡಿ.

*ನೆತ್ತಿಯಲ್ಲಿನ ತುರಿಕೆ ಕಡಿಮೆಯಾಗಲು ಕರ್ಪೂರದ ಎಣ್ಣೆಯನ್ನು ನೆತ್ತಿಗೆ ಹಚ್ಚಬಹುದು. ಆದರೆ ಕರ್ಪೂರ ಸುಡುವ ಗುಣಗಳನ್ನು ಹೊಂದಿರುವುದರಿಂದ ಚರ್ಮದ ಊತ ಕಂಡು ಬಂದರೆ ಅದನ್ನು ಬಳಸಬೇಡಿ.

*ಹೇನುಗಳನ್ನು ನಿವಾರಿಸಲು ತಲೆ ಸ್ನಾನ ಮಾಡುವ ನೀರಿಗೆ ಕರ್ಪೂರದ ಎಣ್ಣೆಯನ್ನು ಹಾಕಿ ಬಳಸಿದರೆ ಹೇನು, ಅದರ ಮರಿ ಮೊಟ್ಟೆಗಳು ನಾಶವಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...