ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಗಳಲ್ಲಿ ಶುದ್ಧವಾದ ವಸ್ತುಗಳಿಗಿಂತ ಕಲಬೆರಕೆ ವಸ್ತುಗಳೇ ಹೆಚ್ಚಾಗಿ ಕಂಡುಬರುತ್ತದೆ.
ಅದೇರೀತಿ ಎಣ್ಣೆಗಳಲ್ಲಿಯೂ ಕೂಡ ನಕಲಿ, ಕಲಬೆರೆಕೆ ಎಣ್ಣೆಗಳು ಹೆಚ್ಚು ಕಂಡುಬರುತ್ತದೆ. ಆಲೀವ್ ಎಣ್ಣೆ ಆರೋಗ್ಯಕ್ಕೆ ಉತ್ತಮ ನಿಜ. ಆದರೆ ನಕಲಿ ಆಲೀವ್ ಎಣ್ಣೆಯನ್ನು ಬಳಸಿದರೆ ಆರೋಗ್ಯಕ್ಕೆ ಹಾನಿಕಾರಕ. ಹಾಗಾಗಿ ಈ ಆಲೀವ್ ಎಣ್ಣೆ, ಶುದ್ಧವೇ? ಅಶುದ್ಧವೇ ಕಂಡು ಹಿಡಿಯುವುದು ಹೇಗೆ ಗೊತ್ತಾ?
ಸ್ವಲ್ಪ ಆಲೀವ್ ಎಣ್ಣೆಯನ್ನು ನಿಮ್ಮ ನಾಲಿಗೆ ಮೇಲೆ ಹಾಕಿಕೊಳ್ಳಿ, ಅದು ಕಹಿಯಾಗಿದ್ದರೆ ಶುದ್ಧ ಎಂದರ್ಥ.
ಹಾಗೇ ಗಾಜಿನ ಮೇಲೆ ಸ್ವಲ್ಪ ಆಲೀವ್ ಎಣ್ಣೆ ಹಾಕಿ ಕೈಯಿಂದ ಸ್ವಲ್ಪ ಸಮಯದವರೆಗೆ ಚೆನ್ನಾಗಿ ಉಜ್ಜಿ. ಗಾಜು ಬಿಸಿಯಾದಾಗ ಆ ಎಣ್ಣೆಯ ವಾಸನೆ ನೋಡಿ ಅದು ಹುಳಿಯಾದ ವಾಸನೆ ಇದ್ದರೆ ಅದು ಶುದ್ಧ ಎಂದರ್ಥ. ಯಾಕೆಂದರೆ ನಕಲಿ ಎಣ್ಣೆ ವಾಸನೆಯಿಂದ ಕೂಡಿರುವುದಿಲ್ಲ.