ಹಿಂದೂ ಧರ್ಮದ ಪ್ರಕಾರ, ವಾರದಲ್ಲಿ ಏಳು ದಿನಗಳನ್ನು ಒಂದೊಂದು ದೇವರಿಗೆ ಅರ್ಪಿಸಲಾಗಿದೆ. ಶುಕ್ರವಾರ ತಾಯಿ ಲಕ್ಷ್ಮಿಗೆ ಅರ್ಪಿಸಲಾಗಿದೆ. ಶುಕ್ರವಾರ ಮೊಸರು ತಿನ್ನುವುದು ಶುಭಕರವೆಂದು ನಂಬಲಾಗಿದೆ. ಶುಕ್ರವಾರ ಮೊಸರು ಸೇವನೆ ಮಾಡಿದ್ರೆ ಧನಾಗಮನವಾಗುತ್ತದೆ.
ಶುಕ್ರವಾರದ ದಿನ ಮನೆಯಿಂದ ಹೊರಗೆ ಹೋಗುವ ಮೊದಲು ಮೊಸರನ್ನು ತಿನ್ನುವುದು ಮಂಗಳಕರ. ಶುಕ್ರವಾರ ಮೊಸರು ತಿಂದ್ರೆ ಯಶಸ್ಸು ಲಭಿಸುತ್ತದೆ. ಕೆಲವರು ಈ ಪದ್ಧತಿಯನ್ನು ಅನುಸರಿಸುತ್ತಾರೆ. ಆದ್ರೆ ಇದಕ್ಕೆ ಕಾರಣವೇನು ಎಂಬುದು ಕೆಲವರಿಗೆ ತಿಳಿದಿಲ್ಲ.
ತಾಯಿ ಲಕ್ಷ್ಮಿಯನ್ನು ಧನದ ದೇವತೆ ಎಂದು ನಂಬಲಾಗಿದೆ. ಶುಕ್ರವಾರ ಲಕ್ಷ್ಮಿಗೆ ಮೀಸಲು. ಲಕ್ಷ್ಮಿಗೆ ಬಿಳಿ ಬಣ್ಣ ಇಷ್ಟ. ಶುಕ್ರವಾರ ಲಕ್ಷ್ಮಿ ಆರಾಧನೆ ನಡೆಯುತ್ತದೆ. ಶುಕ್ರವಾರ ಲಕ್ಷ್ಮಿ ಪೂಜೆ ಮಾಡಿದ್ರೆ ಧನ ಪ್ರಾಪ್ತಿಯಾಗುತ್ತದೆ. ತಾಯಿ ಲಕ್ಷ್ಮಿಗೆ ಬಿಳಿ ಸಿಹಿಯನ್ನು ಅರ್ಪಿಸಲಾಗುತ್ತದೆ. ಹಾಗಾಗಿ ಶುಕ್ರವಾರ ಮೊಸರು ಸೇವನೆ ಮಾಡಬೇಕು. ಶುಕ್ರವಾರ ಮೊಸರು ಸೇವನೆ ಮಾಡುವುದ್ರಿಂದ ಲಕ್ಷ್ಮಿ ಖುಷಿಯಾಗ್ತಾಳೆ. ಲಕ್ಷ್ಮಿ ಪ್ರಿಯ ಮೊಸರನ್ನು ಒಳ್ಳೆ ಕೆಲಸಕ್ಕೆ ಬಳಸಲಾಗುತ್ತದೆ.