ವಾತಾವರಣದ ಧೂಳು, ಮಾಲಿನ್ಯ, ಪೌಷ್ಟಿಕಾಂಶದ ಕೊರತೆಯಿಂದ ಕೂದಲುದುರುವುದು, ತಲೆಹೊಟ್ಟು ಮುಂತಾದ ಕೂದಲಿನಲ್ಲಿ ಹಲವು ಸಮಸ್ಯೆಗಳು ಕಾಡುತ್ತದೆ.
ಕೂದಲಿನ ಸಮಸ್ಯೆಗಳನ್ನು ನಿವಾರಿಸಲು ತೆಂಗಿನೆಣ್ಣೆ ಬಹಳ ಸಹಕಾರಿಯಾಗಿದೆ. ತೆಂಗಿನೆಣ್ಣೆಯಿಂದ ಕೂದಲಿನ ಈ 4 ಸಮಸ್ಯೆಗಳನ್ನು ನಿವಾರಿಸಬಹುದು.
*ನೀವು ಕೂದಲುದುರುವ ಸಮಸ್ಯೆಯಿಂದ ಬಳಲುತ್ತಿದ್ದರೆ ಹರಳೆಣ್ಣೆಗೆ ತೆಂಗಿನೆಣ್ಣೆ ಮಿಕ್ಸ್ ಮಾಡಿ ನೆತ್ತಿಗೆ ಹಚ್ಚಿ, ಇದರಿಂದ ರಕ್ತಪರಿಚಲನೆ ಸರಾಗವಾಗಿ ಆಗುತ್ತದೆ.
ತೆಂಗಿನೆಣ್ಣೆ ನೆತ್ತಿಯ ತೇವಾಂಶವನ್ನು ಕಾಪಾಡುತ್ತದೆ. ಹಾಗೇ ಟೀ ಟ್ರೀ ಆಯಿಲ್ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರ ನಾಶಕ ಗುಣಗಳನ್ನು ಹೊಂದಿದೆ. ಹಾಗಾಗಿ ಇದು ತಲೆಹೊಟ್ಟನ್ನು ನಿವಾರಿಸಲು ತೆಂಗಿನೆಣ್ಣೆಗೆ ಟೀ ಟ್ರೀ ಆಯಿಲ್ ನ್ನು ಮಿಕ್ಸ್ ಮಾಡಿ ಹಚ್ಚಿ.
* ತೆಂಗಿನೆಣ್ಣೆ ನೆತ್ತಿಯ ತೇವಾಂಶವನ್ನು ಕಾಪಾಡುವುದರಿಂದ ಅದಕ್ಕೆ ಅಲೊವೆರಾ ಜೆಲ್ ನ್ನು ಮಿಕ್ಸ್ ಮಾಡಿ ಹಚ್ಚಿ. ಇದರಿಂದ ಒಣ ಕೂದಲಿನ ಸಮಸ್ಯೆ ನಿವಾರಣೆಯಾಗುತ್ತದೆ.
*ಹಾನಿಗೊಳಗಾದ ಕೂದಲು ಮತ್ತೆ ಬೆಳೆಯಲು ರೋಸ್ ಆಯಿಲ್ ಗೆ ತೆಂಗಿನೆಣ್ಣೆ ಮಿಕ್ಸ್ ಮಾಡಿ ಹಚ್ಚಿ. ಇದರಿಂದ ರಕ್ತ ಪರಿಚಲನೆ ಸರಾಗವಾಗಿ ಆಗಿ ಡ್ಯಾಮೇಜ್ ಆದ ಕೂದಲಿಗೆ ಹೊಸ ಹೊಳಪು ನೀಡುತ್ತದೆ.