
ಅಡಕೆಯನ್ನು ತಾಂಬೂಲದ ಜೊತೆ ಕೊಡುವುದನ್ನು ನೋಡಿದ್ದೇವೆ. ಅದು ಬಿಟ್ಟರೆ ಪೂಜೆಗೆ ಹಾಗೇ ಹಿರಿಯರು ಎಲೆ ಜೊತೆ ಸೇರಿಸಿ ತಿನ್ನುವುದನ್ನು ನೋಡಿದ್ದೇವೆ. ಆದರೆ ಅಡಿಕೆ ಜಗಿದರೆ ಎಷ್ಟೆಲ್ಲಾ ಪ್ರಯೋಜನಗಳಿವೆ ಅಂತ ಗೊತ್ತಾ.
ಅಡಿಕೆಗಳನ್ನು ಕಡೆಗಣಿಸದೆ ಅಡಿಕೆಯ ಚೂರುಗಳನ್ನು ಪ್ರತಿಸಲ ಊಟದ ನಂತರ 20 ರಿಂದ 40 ನಿಮಿಷ ಜಗಿದು ಉಗಿಯುವುದರಿಂದ ಕೊಲೆಸ್ಟ್ರಾಲ್ ಮತ್ತು ಬಿಪಿ ಸಮಸ್ಯಗಳಿಗೆ ಪರಿಹಾರ ಕಂಡುಕೊಳ್ಳಬಹುದು.
ಅಡಿಕೆ ಜಗಿಯುವಾಗ ಬಾಯಿಯಲ್ಲಿ ಉತ್ಪತ್ತಿಯಾಗುವ ಜೊಲ್ಲುರಸದ ಜೊತೆ ಅಡಿಕೆಯ ರಸ ರಕ್ತವನ್ನು ತಿಳಿಗೊಳಿಸುತ್ತದೆ. ಇದರಿಂದಾಗಿ ರಕ್ತ ಸರಾಗವಾಗಿ ಹರಿಯುವಂತೆ ಮಾಡುತ್ತದೆ. ಇದು ರಕ್ತದೊತ್ತಡವನ್ನು ಗಣನೀಯವಾಗಿ ತಗ್ಗಿಸುತ್ತದೆ.