ಮೆಂತೆ ಎಂದರೆ ಮಾರು ದೂರ ಓಡಿ ಹೋಗುತ್ತೀರಾ. ಅದರ ವಾಸನೆ ಎಂದರೆ ಇಷ್ಟವಿಲ್ಲ ಎನ್ನುತ್ತೀರಾ, ಹಾಗಿದ್ದರೆ ಇಂದೇ ನಿಮ್ಮ ತಪ್ಪನ್ನು ತಿದ್ದಿಕೊಳ್ಳಿ. ಮೆಂತೆ ಸೇವನೆಯಿಂದ ಎಷ್ಟೆಲ್ಲಾ ಲಾಭಗಳಿವೆ ಗೊತ್ತೇ?
ಮೆಂತೆ ಬೀಜದಲ್ಲಿ ವಿಶಿಷ್ಟವಾದ ನಾರಿನಂಶವಿದ್ದು ಇದು ಕರುಳು ಗ್ಲುಕೋಸ್ ಹೀರುವುದನ್ನು ಕಡಿಮೆ ಮಾಡುತ್ತದೆ. ಪ್ರತಿದಿನ ಹತ್ತು ಮೆಂತೆ ಬೀಜವನ್ನು ನೀರಿನಲ್ಲಿ ನೆನೆಸಿಟ್ಟು ಇದನ್ನು ಸೇವಿಸಿದರೆ ಮಧುಮೇಹ ನಿಯಂತ್ರಣದಲ್ಲಿ ಇರುತ್ತದೆ.
ಇದರಲ್ಲಿ ಪ್ರೊಟೀನ್ ಜೊತೆ ಕಬ್ಬಿಣಾಂಶವೂ ಇದ್ದು ಬಾಣಂತಿಯರು ಇದನ್ನು ಸೇವಿಸುವುದರಿಂದ ಎದೆಹಾಲು ಹೆಚ್ಚುತ್ತದೆ. ಆಸಿಡಿಟಿ ಸಮಸ್ಯೆ ನಿಯಂತ್ರಣಕ್ಕೆ ಬರುತ್ತದೆ. ಋತುಚಕ್ರಕ್ಕೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುತ್ತವೆ.
ತ್ವಚೆಯ ಕಾಂತಿ ವೃದ್ಧಿಯಾಗಲು ಇದನ್ನು ಹಾಲಿನೊಂದಿಗೆ ರುಬ್ಬಿ ಪೇಸ್ಟ್ ರೀತಿ ಹಚ್ಚಬಹುದು. ಕೂದಲು ಉದ್ದನೆಯದಾಗಿ ಮತ್ತು ದಪ್ಪಗಾಗಿ ಬೆಳೆಯಬೇಕೆಂದಿದ್ದರೆ ಮೊಸರಿನೊಂದಿಗೆ ಮೆಂತೆ ಪೇಸ್ಟ್ ಬೆರೆಸಿ ಹಚ್ಚಿಕೊಳ್ಳಬಹುದು.