ಅಪ್ಪುಗೆಯಲ್ಲೊಂದು ನೆಮ್ಮದಿ ಇದೆ. ದುಃಖದಲ್ಲಿರುವವರನ್ನು ತಬ್ಬಿ ಸಂತೈಸಿದಾಗ ಅವರಿಗೊಂದು ರೀತಿಯ ನೆಮ್ಮದಿ ಸಿಗುತ್ತದೆ. ತಾಯಿ, ಮಗುವನ್ನು ಅಪ್ಪಿಕೊಂಡಾಗ ಮಗುವಿಗೆ ಬೆಚ್ಚನೆಯ ಗೂಡಿನಲ್ಲಿರುವ ಅನುಭವವಾಗುತ್ತದೆ. ಹೀಗೆ ಅಪ್ಪುಗೆಯಿಂದ ಸಾಕಷ್ಟು ಅನುಕೂಲಗಳಿವೆ.
ಮಾನವನ ದೇಹಕ್ಕೆ ಆಕ್ಸಿಟೋಸಿನ್ ಬಹಳ ಮುಖ್ಯ. ಇದರಿಂದ ನಾವು ಪರಸ್ಪರ ಸಂಪರ್ಕ ಹೊಂದಲು ಸಾಧ್ಯ. ಬೇರೆಯವರನ್ನು ತಿಳಿಯಲು ಆಕ್ಸಿಟೋಸಿನ್ ನೆರವಾಗುತ್ತದೆ. ಅಪ್ಪುಗೆಯಿಂದ ಈ ಆಕ್ಸಿಟೋಸಿನ್ ಬಿಡುಗಡೆಯಾಗುತ್ತದೆ.
ರೋಗದ ಜೊತೆ ಹೊಡೆದಾಡಲು ಔಷಧಿ ಜೊತೆಗೆ ಒಂದು ಪ್ರೀತಿಯ ಅಪ್ಪುಗೆ ಕೂಡಬೇಕಾಗುತ್ತದೆ. ಇದು ನೇರವಾಗಿ ನಿಮ್ಮ ರೋಗ ನಿರೋಧಕ ಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ. ಅಪ್ಪುಗೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.
ದೇಹದಲ್ಲಿ ಸ್ವಲ್ಪ ನೋವು, ದಣಿವು ಕಾಣಿಸ್ತಿದೆಯಾ. ಹಾಗಿದ್ರೆ ನಿಮ್ಮ ಸ್ನೇಹಿತರನ್ನು ನೆನಪು ಮಾಡಿಕೊಳ್ಳಿ. ಅವರನ್ನೊಮ್ಮೆ ಬಿಗಿಯಾಗಿ ಅಪ್ಪಿಕೊಳ್ಳಿ. ಕ್ಷಣ ಮಾತ್ರದಲ್ಲಿ ನಿಮಗೆ ಸ್ವಲ್ಪ ನೆಮ್ಮದಿ ಸಿಗುತ್ತದೆ.
ಲೈಂಗಿಕ ಜೀವನದಲ್ಲೂ ಅಪ್ಪುಗೆ ಬಹಳ ಮಹತ್ವ ಪಡೆದಿದೆ. ಲೈಂಗಿಕ ಜೀವನವನ್ನು ಇನ್ನಷ್ಟು ಸಂತೋಷಗೊಳಿಸಲು ಇಷ್ಟಪಡುವುದಾದ್ರೆ ಸಂಗಾತಿಯನ್ನು ತಬ್ಬಿಕೊಳ್ಳಲು ಮರೆಯಬೇಡಿ.
ಯಾವುದೋ ವಿಚಾರಕ್ಕೆ ಆತಂಕ ಮನೆ ಮಾಡಿದ್ದರೆ ಚಿಂತೆ ಬೇಡ. ಒಂದು ಬಿಗಿಯಾದ ಅಪ್ಪುಗೆ ನಿಮ್ಮ ಆತಂಕವನ್ನು ದೂರ ಮಾಡಿ ಧೈರ್ಯ ತುಂಬುತ್ತದೆ.