ದಾಸವಾಳ ಹೂವನ್ನು ದೇವರ ಅಲಂಕಾರಕ್ಕೆ ಇಡುವುದರ ಹೊರತಾಗಿ ಆರೋಗ್ಯದ ವಿಷಯಗಳಿಗೆ ಬಳಸಬಹುದು ಎಂಬುದು ನಿಮಗೆ ಗೊತ್ತೇ?
ದಾಸವಾಳ ಹೂವಿನಲ್ಲಿ ಅತ್ಯುತ್ತಮ ಆ್ಯಂಟಿ ಆಕ್ಸಿಡೆಂಟ್ ಗಳಿದ್ದು ಇವು ನಮ್ಮ ದೇಹದಿಂದ ಅನಗತ್ಯ ಕಲ್ಮಶಗಳನ್ನು ಹೊರಹಾಕಲು ನೆರವಾಗುತ್ತವೆ. ತಲೆನೋವು ಅಥವಾ ಶೀತ ಕಾಣಿಸಿಕೊಂಡಾಗ ದಾಸವಾಳದ ಹೂವಿನ ಚಹಾ ಮಾಡಿಕೊಂಡು ಕುಡಿದರೆ ಸ್ವಲ್ಪ ತಲೆನೋವು ಕಡಿಮೆಯಾಗುತ್ತದೆ.
ಮಹಿಳೆಯರಿಗೆ ಮೆನೊಪಾಸ್ ಸಮಯದಲ್ಲಿ ಕಾಡುವ ಬೆವರುವ, ವಿಪರೀತ ಸುಸ್ತೆನಿಸುವ ಸಮಸ್ಯೆಯಿಂದ ಬಳಲುತ್ತಿದ್ದರೆ ಅವರು ಕೆಂಪು ಅಥವಾ ಬಿಳಿ ದಾಸವಾಳದ ಹೂವನ್ನು ತಿನ್ನುವುದು ಅಥವಾ ಅದರ ಚಹಾ ಮಾಡಿ ಕುಡಿಯುವುದು ಬಹಳ ಒಳ್ಳೆಯದು.
ಮೊಡವೆ ಕಡಿಮೆ ಮಾಡಿ ಸದಾ ಯೌವ್ವನಿಗರಾಗಿ ಕಾಣಿಸಿಕೊಳ್ಳಲು ಈ ದಾಸವಾಳ ನೆರವಾಗುತ್ತದೆ. ಇದನ್ನು ಪೇಸ್ಟ್ ಮಾಡಿ ತುಸು ಜೇನುತುಪ್ಪು ಬೆರೆಸಿ ಮುಖಕ್ಕೆ ಮಾಸ್ಕ್ ರೀತಿ ಹಾಕಿಕೊಂಡರೆ ನಿಮ್ಮ ನಿಜ ವಯಸ್ಸನ್ನು ಗುರುತಿಸಲು ಯಾರಿಗೂ ಸಾಧ್ಯವಾಗದು.
ಕೂದಲು ಉದುರುವ ಸಮಸ್ಯೆಗೆ ಇದು ಅತ್ಯುತ್ತಮ ಮದ್ದು. ದೇಹದಲ್ಲಿ ನೀರಿನಂಶ ಕಡಿಮೆಯಾಗುವುದನ್ನು ತಡೆಯುತ್ತದೆ. ಕಣ್ಣುಗಳ ಆಯಾಸವನ್ನೂ ಕಡಿಮೆ ಮಾಡುತ್ತದೆ. ಅನಗತ್ಯ ಕೊಬ್ಬನ್ನು ಕಡಿಮೆ ಮಾಡುತ್ತದೆ.