ಅಡುಗೆ ಮನೆಯಲ್ಲಿ ನಾನ್ ಸ್ಟಿಕ್ ಪಾತ್ರೆಗಳನ್ನು ಈಗ ಎಲ್ಲರೂ ಬಳಸ್ತಾರೆ. ಎಣ್ಣೆ ಪದಾರ್ಥಗಳನ್ನು ಮಾಡಲು ಇದು ಬೆಸ್ಟ್ ಎನ್ನುವ ಅಭಿಪ್ರಾಯ ಮಹಿಳೆಯರದ್ದು. ತಳ ಹಿಡಿಯೋದಿಲ್ಲ ಎನ್ನುವ ಕಾರಣಕ್ಕೆ ಬಹುತೇಕ ಮಹಿಳೆಯರು ನಾನ್ ಸ್ಟಿಕ್ ಪಾತ್ರೆ ಖರೀದಿಗೆ ಮುಂದಾಗ್ತಾರೆ. ಆದ್ರೆ ಈ ನಾನ್ ಸ್ಟಿಕ್ ಪಾತ್ರೆ ನಿಧಾನವಾಗಿ ನಿಮ್ಮ ಆರೋಗ್ಯ ಹಾಳು ಮಾಡುತ್ತೆ ಎಂಬುದು ನಿಮಗೆ ಗೊತ್ತಾ?
ನಾನ್ ಸ್ಟಿಕ್ ಪಾತ್ರೆಗಳನ್ನು ಕ್ಯಾನ್ಸರ್ಕಾರಕ ರಾಸಾಯನಿಕಗಳಿಂದ ತಯಾರಿಸಲಾಗುತ್ತದೆ. ಪ್ರತಿ ಬಾರಿ ಪಾತ್ರೆ ಬಿಸಿ ಮಾಡಿದಾಗಲೂ ಈ ರಾಸಾಯನಿಕ ಹೊಗೆಯಲ್ಲಿ ಸೇರುತ್ತದೆ. ಇದು ನಿಮ್ಮ ಆರೋಗ್ಯವನ್ನು ಹದಗೆಡಿಸುತ್ತದೆ. ನೀವು ಅಥವಾ ನಿಮ್ಮ ಮನೆಯವರು ಪದೇ ಪದೇ ಸಾಂಕ್ರಾಮಿಕ ರೋಗಕ್ಕೆ ತುತ್ತಾಗುತ್ತಿದ್ದರೆ ಇದಕ್ಕೆ ನಾನ್ ಸ್ಟಿಕ್ ಪಾತ್ರೆ ಕಾರಣ.
ತುಂಬಾ ಸಮಯ ನಾನ್ ಸ್ಟಿಕ್ ಪಾತ್ರೆಯಲ್ಲಿ ಆಹಾರ ತಯಾರಿಸುವುದರಿಂದ ಹಾಗೂ ಸ್ಟೀಲ್ ಸೌಟಿನಲ್ಲಿ ಕೈ ಆಡಿಸುವುದು ಮತ್ತೂ ಅಪಾಯಕಾರಿ. ಇದ್ರಿಂದ ಹೊರ ಬರುವ ಹೊಗೆ ಕ್ಯಾನ್ಸರ್ ಗೆ ಕಾರಣವಾಗುತ್ತದೆ. ಯಾರ ಮನೆಯಲ್ಲಿ ನಾನ್ ಸ್ಟಿಕ್ ಪಾತ್ರೆಯಲ್ಲಿ ಆಹಾರ ತಯಾರಿಸ್ತಾರೋ ಆ ಮನೆಯ ಸದಸ್ಯರಿಗೆ ಜ್ವರದ ಲಕ್ಷಣ ಸದಾ ಇರುತ್ತದೆ. ಗರ್ಭಿಣಿಯರು ನಾನ್ ಸ್ಟಿಕ್ ಆಹಾರ ಸೇವನೆ ಮಾಡಬಾರದು. ಮಹಿಳೆಯರ ಥೈರಾಯ್ಡ್ ಮಟ್ಟ ಇಳಿಯಲು ಇದೇ ಕಾರಣ. ಲಿವರ್ ಕ್ಯಾನ್ಸರ್ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ.
ನಾನ್ ಸ್ಟಿಕ್ ನಲ್ಲಿ ತಯಾರಿಸಿದ ಆಹಾರ ಸೇವನೆ ಮಾಡುವುದರಿಂದ ದೇಹದ ಒಳಗೂ ವಿಷ ಸೇರಲ್ಪಡುತ್ತದೆ. ಇದು ಸುಲಭವಾಗಿ ಹೋಗುವುದಿಲ್ಲ. ಉಳಿದ ಆಹಾರವನ್ನು ಇದ್ರಲ್ಲಿ ಇಡುವುದರಿಂದ ಆಹಾರ ಮತ್ತಷ್ಟು ವಿಷವಾಗುತ್ತದೆ. ಇದನ್ನು ತೆಗೆಯಲು ಸುಮಾರು ನಾಲ್ಕು ವರ್ಷ ಬೇಕಾಗುತ್ತದೆ. ಆದಷ್ಟು ನಾನ್ ಸ್ಟಿಕ್ ಪಾತ್ರೆ ಬಳಸಬೇಡಿ. ಅನಿವಾರ್ಯವಾದಲ್ಲಿ ಸ್ಟೀಲ್ ಸೌಟು ಬಿಟ್ಟು ಮರದ ಸೌಟ್ ಬಳಸಿ.