ಹೆಸರಿನ ಹಿಂದೆ ಇತಿಹಾಸವಿರುತ್ತದೆ. ಕೆಲವೊಂದು ವಸ್ತುಗಳು ತಯಾರಾದ ಪ್ರದೇಶ ಅಥವಾ ಅದರ ವೈಶಿಷ್ಟ್ಯತೆಯಿಂದ ಅದಕ್ಕೆ ಹೆಸರಿಡಲಾಗುತ್ತದೆ. ಹಾಗೆ ಎಲ್ಲರ ಅಚ್ಚುಮೆಚ್ಚಿನ ಚಪ್ಪಲಿ ಹವಾಯಿಗೆ ಕೂಡ ಹೆಸರು ಬರಲು ಅದರದೇ ಆದ ಕಾರಣವಿದೆ.
ಹವಾಯಿ ಕಾಲಿಗೆ ಆರಾಮ ನೀಡುತ್ತದೆ ಎಂಬ ಕಾರಣಕ್ಕೆ ಈ ಚಪ್ಪಲಿಗೆ ಹವಾಯಿ ಎಂದು ಹೆಸರು ಬರಲಿಲ್ಲ. ಇತಿಹಾಸಕಾರರ ಪ್ರಕಾರ, ಅಮೆರಿಕಾದಲ್ಲಿ ಒಂದು ದ್ವೀಪವಿದೆ. ಅದರ ಹೆಸರು ಹವಾಯಿ. ಆ ದ್ವೀಪದಲ್ಲಿ ಒಂದು ವಿಶೇಷ ಮರವಿದೆ. ಅದನ್ನು ಟಿ ಎಂದು ಕರೆಯಲಾಗುತ್ತದೆ. ಈ ಮರದಿಂದ ವಿಶೇಷವಾದ ರಬ್ಬರ್ ಬರುತ್ತದೆ. ಅದ್ರಿಂದ ಈ ಚಪ್ಪಲಿ ತಯಾರಿಸಲಾಗಿದೆ. ಹಾಗಾಗಿ ಅದಕ್ಕೆ ಹವಾಯಿ ಎಂದು ಕರೆಯಲಾಗುತ್ತದೆ.
ಇದು ಮಾತ್ರವಲ್ಲ, ಹವಾಯಿ ಚಪ್ಪಲಿಗೆ ಜಪಾನ್ ಕೂಡ ಕಾರಣ ಎನ್ನಲಾಗುತ್ತದೆ. ಹವಾಯಿ ದ್ವೀಪಕ್ಕೆ ರಬ್ಬರ್ ತೆಗೆಯಲು ಜಪಾನ್ ಜನರನ್ನು ಕಳುಹಿಸಲಾಗಿತ್ತು. ಜಪಾನ್ ಜನರು, ಹವಾಯಿಯಂತಹ ಚಪ್ಪಲಿ ಧರಿಸುತ್ತಿದ್ದರು. ಅದಕ್ಕೆ ಜೋರಿ ಎಂದು ಕರೆಯಲಾಗುತ್ತಿತ್ತು. ಹವಾಯಿ ದ್ವೀಪಕ್ಕೆ ಈ ಚಪ್ಪಲಿ ಧರಿಸಿ ಹೋದ ಜಪಾನ್ ಸಿಬ್ಬಂದಿ ಟಿ ಮರದಿಂದ ರಬ್ಬರ್ ತೆಗೆದು ಚಪ್ಪಲಿ ತಯಾರಿಸಿದರಂತೆ. ಆ ಚಪ್ಪಲಿಗೆ ಅವರು ಜೋರಿ ಬದಲು ಹವಾಯಿ ಎಂದು ನಾಮಕರಣ ಮಾಡಿದರು ಎನ್ನಲಾಗುತ್ತದೆ. ಒಟ್ಟಿನಲ್ಲಿ ಹವಾಯಿಗೆ ದೊಡ್ಡ ಇತಿಹಾಸವಿದೆ. ಎರಡನೇ ಮಹಾಯುದ್ಧದಲ್ಲಿ ಹವಾಯಿ ಚಪ್ಪಲ್ ಬಳಸಲಾಯ್ತು ಎನ್ನಲಾಗಿದೆ. ಭಾರತಕ್ಕೆ ಹವಾಯಿ ಬಂದಿದ್ದು ಬಾಟಾ ಕಂಪನಿ ಮೂಲಕ.