ಪ್ಲಾಸ್ಟಿಕ್ ಬಾಟಲ್ ಗಳಲ್ಲಿ ನೀರು ಖಾಲಿಯಾದಂತೆಲ್ಲಾ ಮತ್ತೆ ಮತ್ತೆ ತುಂಬಿಕೊಂಡು ಕುಡಿಯುವುದು ಎಷ್ಟು ಡೇಂಜರಸ್ ಗೊತ್ತಾ? ಇಂತಹ ಬಾಟಲ್ ಗಳು ಕೀಟಾಣುಗಳ ನೆಲೆಯಾಗಿರುತ್ತವೆ.
ಸರಿಯಾಗಿ ತೊಳೆಯದೇ ಬಳಸುವ ಪ್ಲಾಸ್ಟಿಕ್ ಬಾಟಲಿಗಳಲ್ಲಿ ಟಾಯ್ಲೆಟ್ ನಲ್ಲಿ ಇರುವಷ್ಟೇ ಕೀಟಾಣುಗಳು ಇರುತ್ತವೆ ಎಂದು ಒಂದು ಸಂಶೋಧನೆ ಹೇಳಿದೆ.
ವಿಜ್ಞಾನಿಗಳ ಪ್ರಕಾರ ಬಾಟಲಿಗಳಲ್ಲಿ ಇರುವ ಪ್ರತಿಶತ 60 ರಷ್ಟು ಕೀಟಾಣುಗಳು ರೋಗ ಹರಡುವಂತವುಗಳಾಗಿವೆ. ಇಂತಹ ಕೀಟಾಣುಗಳಿಂದ ಡಯೇರಿಯಾ, ಫುಡ್ ಪಾಯ್ಸನಿಂಗ್, ವಾಂತಿ ಮುಂತಾದ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಇದರಿಂದ ಮುಕ್ತರಾಗಲು ನೀವು ಅನುಸರಿಸಬೇಕಾದ ಕ್ರಮಗಳು ಹೀಗಿವೆ.
ಬಾಟಲಿಯನ್ನು ಪುನಃ ಪುನಃ ಬದಲಾಯಿಸುತ್ತಿರಬೇಕು.
ಬಾಟಲಿಯನ್ನು ಬದಲಾಯಿಸದೇ ಇದ್ದಲ್ಲಿ ಬಾಟಲಿಯನ್ನು ನೀರಿಗೆ ಹಾಕಿ ಕುದಿಸಿ.
ಬಾಟಲಿಯನ್ನು ಪ್ರತಿದಿನ ಬಿಸಿ ನೀರು ಮತ್ತು ಸಾಬೂನಿನಿಂದ ತೊಳೆಯಿರಿ.
ಸ್ಲೈಡ್ ಟಾಪ್ ಮುಚ್ಚಳವಿರುವ ಬಾಟಲಿಗಿಂತ ತೆರೆದ ಮುಚ್ಚಳವಿರುವ ಬಾಟಲಿ ಬಳಕೆ ಉತ್ತಮ.
ಪ್ಲಾಸ್ಟಿಕ್ ಬದಲು ಮೆಟಲ್ ಬಾಟಲಿಗಳನ್ನು ಉಪಯೋಗಿಸಿ.