alex Certify ತಪ್ಪಾದ ಗುಂಪಿನ ರಕ್ತ ಪಡೆಯುವುದು ಎಷ್ಟು ಅಪಾಯಕಾರಿ ಎಂಬುದು ನಿಮಗೆ ತಿಳಿದಿರಲಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಪ್ಪಾದ ಗುಂಪಿನ ರಕ್ತ ಪಡೆಯುವುದು ಎಷ್ಟು ಅಪಾಯಕಾರಿ ಎಂಬುದು ನಿಮಗೆ ತಿಳಿದಿರಲಿ…!

ಅಪಘಾತದಲ್ಲಿ ಗಾಯಗೊಂಡಾಗ ಅಥವಾ ದೌರ್ಬಲ್ಯದಿಂದಾಗಿ ದೇಹದಲ್ಲಿ ರಕ್ತದ ಕೊರತೆಯಿದ್ದರೆ ಅಂಥವರಿಗೆ ರಕ್ತ ವರ್ಗಾವಣೆ ಮಾಡಲಾಗುತ್ತದೆ. ಆದರೆ ತಪ್ಪಾಗಿ ಬೇರೆ ಗುಂಪಿನ ರಕ್ತವನ್ನು ವರ್ಗಾವಣೆ ಮಾಡಿದರೆ ಅನಾಹುತವೇ ಸಂಭವಿಸುತ್ತದೆ. ಜೈಪುರದ ಪ್ರಸಿದ್ಧ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಗೊಂಡ ಯುವಕನಿಗೆ ಮತ್ತೊಂದು ಗುಂಪಿನಿಂದ ರಕ್ತವನ್ನು ನೀಡಿದ್ದರಿಂದ ಆತ ಮೃತಪಟ್ಟಿದ್ದಾನೆ.

ರಾಜಸ್ಥಾನದ ದೌಸಾ ಜಿಲ್ಲೆಯ ಬಂಡಿಕುಯಿ ನಗರದ ನಿವಾಸಿ 23 ವರ್ಷದ ಸಚಿನ್ ಶರ್ಮಾ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ. ಆತನನ್ನು ಜೈಪುರದ ಸವಾಯಿ ಮಾನ್ ಸಿಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಚಿಕಿತ್ಸೆಯ ಸಮಯದಲ್ಲಿ ಆಸ್ಪತ್ರೆಯ ಸಿಬ್ಬಂದಿ ಗಾಯಾಳು ಸಚಿನ್‌ಗೆ AB+ ಬದಲಿಗೆ O+ ರಕ್ತವನ್ನು ನೀಡಿದ್ದಾರೆ. ಬಳಿಕ ಆತನ ಸ್ಥಿತಿ ಮತ್ತಷ್ಟು ಬಿಗಡಾಯಿಸಿದ್ದು, ಯುವಕ ಸಾವನ್ನಪ್ಪಿದ್ದಾನೆ. ತನಿಖೆಯ ವೇಳೆ ಬೇರೊಬ್ಬ ರೋಗಿಯ ‘O+’ ರಕ್ತದ ಚೀಟಿಯನ್ನು ವಾರ್ಡ್‌ ಬಾಯ್‌ ಹಸ್ತಾಂತರಿಸಿದ್ದು ಬಹಿರಂಗವಾಗಿತ್ತು. ಆದ್ದರಿಂದ ಯಾವ ರಕ್ತದ ಗುಂಪಿನವರು ಯಾವ್ಯಾವ ಗುಂಪಿನ ಜನರಿಂದ ರಕ್ತವನ್ನು ಪಡೆಯಬಹುದು ಎಂಬುದನ್ನು ತಿಳಿದುಕೊಂಡಿರಬೇಕು.

0-: ಓ ನೆಗೆಟಿವ್‌ ಗುಂಪಿನವರು ಎಲ್ಲರಿಗೂ ರಕ್ತವನ್ನು ನೀಡಬಹುದು, ಆದರೆ ಅವರು 0- ರಕ್ತವನ್ನು ಮಾತ್ರ ಪಡೆಯಬಹುದು.

O+: ಈ ಗುಂಪಿನವರು AB+, A+, B+, O+ ಗುಂಪಿನವರಿಗೆ ರಕ್ತವನ್ನು ನೀಡಬಹುದು. ಆದರೆ 0- ಮತ್ತು 0+ ರಕ್ತವನ್ನು ಮಾತ್ರ ಪಡೆಯಬಹುದು.

A-: ಇವರು AB-, AB+, A+, A- ಗುಂಪಿನವರಿಗೆ ರಕ್ತವನ್ನು ನೀಡಬಹುದು. ಆದರೆ A- ಮತ್ತು 0- ಗುಂಪಿನವರಿಂದ ಮಾತ್ರ ರಕ್ತವನ್ನು ಪಡೆಯಬಹುದು.

A+: ಇವರು A+ ಮತ್ತು AB+ ರಕ್ತದ ಗುಂಪಿನವರಿಗೆ ರಕ್ತವನ್ನು ನೀಡಬಹುದು. ಆದರೆ 0-, 0+, A- ಮತ್ತು A+ ಗುಂಪಿನವರಿಂದ ರಕ್ತವನ್ನು ಪಡೆಯಬಹುದು.

B-: ಇವರು B-, B+, AB-, AB+ ಗುಂಪಿನವರಿಗೆ ರಕ್ತ ನೀಡಬಹುದು, ಆದರೆ 0- ಮತ್ತು B- ಗುಂಪಿನವರಿಂದ ರಕ್ತವನ್ನು ಪಡೆಯಬಹುದು.

B+: ಇವರು B+, AB+ ಗುಂಪಿನ ವ್ಯಕ್ತಿಗಳಿಗೆ ರಕ್ತವನ್ನು ನೀಡಬಹುದು, ಆದರೆ O-, O+, B- ಮತ್ತು B+ ಗುಂಪಿನ ರಕ್ತವನ್ನು ಪಡೆಯಬಹುದು.

AB-: ಇವರು AB-, AB+ ಗೆ ರಕ್ತವನ್ನು ನೀಡಬಹುದು, ಆದರೆ O-, A-, B- ಮತ್ತು AB- ಗುಂಪಿನ ರಕ್ತವನ್ನು ಪಡೆಯಬಹುದು.

AB+: ಇವರು AB+ ಜನರಿಗೆ ಮಾತ್ರ ರಕ್ತವನ್ನು ನೀಡಬಹುದು, ಆದರೆ ಎಲ್ಲರಿಂದಲೂ ರಕ್ತವನ್ನು ಪಡೆಯಬಹುದು.

ತಪ್ಪು ಗುಂಪಿನ ರಕ್ತವನ್ನು ವರ್ಗಾವಣೆ ಮಾಡಿದರೆ ಏನಾಗುತ್ತದೆ ?

ತಪ್ಪು ರಕ್ತ ವರ್ಗಾವಣೆ ತುಂಬಾ ಅಪಾಯಕಾರಿ. ತೀವ್ರವಾದ ಹೆಮೋಲಿಟಿಕ್ ವರ್ಗಾವಣೆಯ ಪ್ರತಿಕ್ರಿಯೆಯು ಸಂಭವಿಸುತ್ತದೆ. ಇದರ ಲಕ್ಷಣಗಳೆಂದರೆ ಜ್ವರದ ಜೊತೆಗೆ ನಡುಕ, ದೇಹದ ಹಿಂಭಾಗದಲ್ಲಿ ನೋವು ಇತ್ಯಾದಿ.

ತಪ್ಪು ರಕ್ತ ಕಣಗಳು ರೋಗಿಯ ದೇಹವನ್ನು ಪ್ರವೇಶಿಸಿದಾಗ, ಪ್ರತಿರಕ್ಷಣಾ ವ್ಯವಸ್ಥೆಯು ಅವುಗಳನ್ನು ನಾಶಮಾಡಲು ಪ್ರಯತ್ನಿಸುತ್ತದೆ ಮತ್ತು ಈ ಪ್ರಕ್ರಿಯೆಯಲ್ಲಿ ಮೂತ್ರಪಿಂಡಗಳು ವಿಫಲವಾಗಬಹುದು. ಸ್ವಲ್ಪ ಸಮಯದ ನಂತರ ಅವು ಸಂಪೂರ್ಣವಾಗಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಬಹುದು. ಮೂತ್ರದಲ್ಲಿ ರಕ್ತ, ಜ್ವರ, ಸ್ಟ್ರೋಕ್‌ ಮತ್ತು ಸಾವು ಕೂಡ ಸಂಭವಿಸುತ್ತದೆ.

ಅನೇಕ ಬಾರಿ ಹೊರಗಿನಿಂದ ಪಡೆದ ರಕ್ತದ ಕ್ರಾಸ್ ಮ್ಯಾಚಿಂಗ್ ಅನ್ನು ಆಸ್ಪತ್ರೆಯಲ್ಲಿ ಮಾಡಲಾಗುವುದಿಲ್ಲ, ಅವಸರದಲ್ಲಿ ರಕ್ತವನ್ನು ವರ್ಗಾಯಿಸಲಾಗುತ್ತದೆ. ಇದು ರೋಗಿಯ ಪ್ರಾಣಕ್ಕೇ ಕುತ್ತು ತರುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...