ನಾವು ಬಾಲ್ಯದಲ್ಲಿ ಆನಂದಿಸಿದ ಸಿಹಿತಿಂಡಿಗಳು ಮತ್ತು ಮಿಠಾಯಿಗಳು ಅನೇಕ ಇವೆ. ಆದರೆ, ಕ್ಯಾಡ್ಬರಿ ಡೈರಿ ಮಿಲ್ಕ್ ಚಾಕೊಲೇಟ್ ಅಂದರೆ ಸಾಕು ಮಕ್ಕಳು ಮಾತ್ರವಲ್ಲ ದೊಡ್ಡವರು ಕೂಡ ಇಷ್ಟಪಟ್ಟು ತಿನ್ನುತ್ತಾರೆ. ಒಂದು ಕಾಲದಲ್ಲಿ ಈ ಚಾಕೊಲೇಟ್ ಬ್ರಾಂಡ್ ಎಷ್ಟು ಜನಪ್ರಿಯವಾಯಿತು ಎಂದರೆ ಜನರು ಅಂಗಡಿಗಳಿಗೆ ಹೋಗಿ ಕ್ಯಾಡ್ಬರಿಯನ್ನು ಕೇಳುತ್ತಿದ್ದರು. ಈಗಲೂ ಸಹ ತನ್ನ ಜನಪ್ರಿಯತೆಯನ್ನು ಹಾಗೆಯೇ ಉಳಿಸಿಕೊಂಡಿದೆ.
ಆದರೆ, ಕ್ಯಾಡ್ಬರಿ ಚಾಕೊಲೇಟ್‌ಗಳ ಸಾಂಪ್ರದಾಯಿಕ ನೇರಳೆ ಹೊದಿಕೆಯ ಹಿಂದಿನ ಕಥೆ ನಿಮಗೆ ತಿಳಿದಿದೆಯೇ? 1831 ರಲ್ಲಿ ಜಾನ್ ಕ್ಯಾಡ್ಬರಿ ಎಂಬ ವ್ಯಕ್ತಿ ಚಾಕೊಲೇಟ್ಗಳನ್ನು ಉತ್ಪಾದಿಸಲು ಪ್ರಾರಂಭಿಸಿದಾಗ ಕ್ಯಾಡ್ಬರಿ ಬ್ರಾಂಡ್ ಪ್ರಾರಂಭವಾಯಿತು. ಕ್ಯಾಡ್ಬರಿ ಡೈರಿ ಮಿಲ್ಕ್ ಅನ್ನು ಮೊದಲು 1905 ರಲ್ಲಿ ಮಾರಾಟ ಮಾಡಲಾಯಿತು.
ರಾಯಲ್ ವಾರಂಟ್ ಹೋಲ್ಡರ್ಸ್ ಅಸೋಸಿಯೇಷನ್‌ನ ಪ್ರಕಾರ, ಕ್ಯಾಡ್‌ಬರಿಯು ತನ್ನ ಮೊದಲ ರಾಯಲ್ ವಾರಂಟ್ ಅನ್ನು 1854 ರಲ್ಲಿ ನೀಡಿತು. ಇದು 1955 ರಿಂದ ಹರ್ ಮೆಜೆಸ್ಟಿ ದಿ ಕ್ವೀನ್‌ನಿಂದ ರಾಯಲ್ ವಾರಂಟ್ ಅನ್ನು ಹೊಂದಿದೆ. ಕ್ಯಾಡ್ಬರಿಯು 2 ಫೆಬ್ರವರಿ 2010 ರಂದು ಮೊಂಡೆಲೆಜ್ ಇಂಟರ್ನ್ಯಾಷನಲ್ ಭಾಗವಾಯಿತು.
ಕ್ಯಾಡ್ಬರಿ ಡೈರಿ ಮಿಲ್ಕ್‌ನ ನೇರಳೆ ಬಣ್ಣವನ್ನು ರಾಣಿ ವಿಕ್ಟೋರಿಯಾ ಅವರಿಗೆ ಗೌರವಾರ್ಥವಾಗಿ ಆಯ್ಕೆ ಮಾಡಲಾಗಿದೆ ಎನ್ನಲಾಗಿದೆ. ಆದರೆ, ನ್ಯಾಯಾಧೀಶರು ಅದರ ವಿಶಿಷ್ಟವಾದ ನೇರಳೆ ಪ್ಯಾಕೇಜಿಂಗ್ ಅನ್ನು ಟ್ರೇಡ್‌ಮಾರ್ಕ್ ಆಗಿ ನೋಂದಾಯಿಸಲು ಸಾಧ್ಯವಿಲ್ಲ ಎಂದು ತೀರ್ಪು ನೀಡಿದ ನಂತರ ಕ್ಯಾಡ್ಬರಿಗೆ ಸಂಕಷ್ಟ ತಂದೊಡ್ಡಿತ್ತು. ಜನಪ್ರಿಯ ಚಾಕೊಲೇಟ್ ಬ್ರ್ಯಾಂಡ್ ಮತ್ತು ಅದರ ಪ್ರತಿಸ್ಪರ್ಧಿ ಬ್ರ್ಯಾಂಡ್ ನೆಸ್ಲೆ ನಡುವಿನ ಜಗಳವೂ ಒಂದು ಕಾರಣವಾಗಿತ್ತು. ಆದರೆ ಇಂದಿಗೂ, ಕ್ಯಾಡ್ಬರಿಯು ಅದರ ನೇರಳೆ ಹೊದಿಕೆ ಮತ್ತು ಗೋಲ್ಡನ್ ಫಾಯಿಲ್ ಹೊದಿಕೆಯನ್ನು ಹೊಂದಿದೆ.