ಬದನೆಕಾಯಿಯು ಹೇಗೆ ತಿನ್ನುವ ತರಕಾರಿಯೋ ಅಂತೆಯೇ ಔಷಧೀಯ ತರಕಾರಿಯೂ ಆಗಿದೆ. ಬದನೆಯ ಬೇರು, ಎಲೆ ಮತ್ತು ಎಳೆಯ ಕಾಯಿ ಎಲ್ಲವೂ ಔಷಧೀಯ ಗುಣಗಳನ್ನು ಹೊಂದಿದೆ.
* ಬದನೆಯ ಎಲೆಗಳನ್ನು ಅರೆದು ಅದಕ್ಕೆ ಸಕ್ಕರೆ ಸೇರಿಸಿ. ಈ ಮಿಶ್ರಣವನ್ನು ನವೆ ಅಥವಾ ತುರಿಕೆ ಇರುವ ಜಾಗಕ್ಕೆ ಹಚ್ಚಿ 1 ಗಂಟೆಯ ನಂತರ ಬಿಸಿ ನೀರಿನಲ್ಲಿ ಸ್ನಾನ ಮಾಡಿದರೆ ತುರಿಕೆ ನಿವಾರಣೆಯಾಗುತ್ತದೆ.
* ಮೂಲವ್ಯಾಧಿಯಿಂದ ಬಳಲುತ್ತಿದ್ದಲ್ಲಿ, ಉದ್ದವಾದ ನೇರಳೆ ಬಣ್ಣದ ಬದನೆಯನ್ನು ಬೇಯಿಸಿ ಅದಕ್ಕೆ ಸ್ವಲ್ಪ ಬೆಲ್ಲ ಸೇರಿಸಿ, ಪ್ರತಿದಿನ ಬೆಳಗ್ಗೆ ಸೇವಿಸಿದರೆ ಮೂಲವ್ಯಾಧಿ ಕಡಿಮೆಯಾಗುತ್ತದೆ.
* ಎಳೆಯ ಬದನೆಯನ್ನು ಹಸುವಿನ ತುಪ್ಪದಲ್ಲಿ ಹುರಿದು ಸೇವಿಸಿದರೆ, ಕಣ್ಣಿನ ಸಮಸ್ಯೆ ದೂರವಾಗುತ್ತದೆ ಮತ್ತು ದೃಷ್ಟಿ ಹೆಚ್ಚುತ್ತದೆ.
* ಯಾವಾಗಲು ಅಂಗೈ ಮತ್ತು ಅಂಗಾಲು ಬೆವರುತ್ತಿದ್ದರೆ, ಬದನೆಯನ್ನು ಸಣ್ಣಗೆ ಹೆಚ್ಚಿ ನೀರಿಗೆ ಹಾಕಿ. ಸ್ವಲ್ಪ ಸಮಯದ ನಂತರ, ಬದನೆಯನ್ನು ತೆಗೆದು ಆ ನೀರಿನಲ್ಲಿ ದಿನವೂ ಕೈ-ಕಾಲುಗಳನ್ನು 30 ನಿಮಿಷ ಮುಳುಗಿಸಿಡಬೇಕು ಹೀಗೆ ಮಾಡುವುದರಿಂದ ಬೆವರುವುದು ನಿಲ್ಲುತ್ತದೆ.
* ಬದನೆ ಎಲೆಗಳನ್ನು ಕೆಂಡದಲ್ಲಿ ಬಿಸಿ ಮಾಡಿ, ಏಟುಬಿದ್ದ ಗಾಯದ ಮೇಲೆ ಕಟ್ಟಿದರೆ, ನೋವು ಬೇಗ ಗುಣವಾಗುತ್ತದೆ.
* ಪಿತ್ತದ ತೊಂದರೆಯಿಂದ ಬಳಲುತ್ತಿದ್ದರೆ ಬದನೆಯನ್ನು ಹೆಚ್ಚಾಗಿ ಸೇವಿಸಬಾರದು. ಬಲಿತ ಬದನೆಯನ್ನು ಉಪಯೋಗಿಸದೆ ಇರುವುದು ಉತ್ತಮ.