ನಮ್ಮ ಅಡುಗೆ ಮನೆಗಳಲ್ಲಿ ಕರಿಬೇವು ಎಂಬ ಎಲೆ ಇದ್ದೇ ಇರುತ್ತದೆ. ಇದಿಲ್ಲದೆ ಅಡುಗೆ ಪರಿಪೂರ್ಣ ಆಗುವುದಿಲ್ಲ ಎಂಬುದು ಗೊತ್ತಿರುವ ವಿಚಾರವೇ. ಹಾಗೆಯೇ ಈ ಕರಿಬೇವಿನ ಎಲೆ ಚಿಕ್ಕದರಾದರೂ ಇದರ ಕೆಲಸ ಮಾತ್ರ ಅಗಾಧವಾದದ್ದು ಅನ್ನೋದು ಅನೇಕ ಜನರಿಗೆ ಗೊತ್ತಿಲ್ಲ. ಕರಿಬೇವಿನ ಔಷಧೀಯ ಗುಣಗಳ ಬಗ್ಗೆ ತಿಳಿಯೋಣ.
ರಕ್ತ ಹೀನತೆಯಿಂದ ಬಳಲುವವರು ಈ ಕರಿಬೇವನ್ನು ಪ್ರತಿನಿತ್ಯ ನಿಯಮಿತವಾಗಿ ತಿನ್ನುತ್ತಾ ಬಂದರೆ ಐರನ್ ಕಂಟೆಂಟ್ ಹೆಚ್ಚಾಗುತ್ತದೆ. ಯಾಕೆಂದರೆ ಕರಿಬೇವಿನಲ್ಲಿ ಐರನ್ ಕಂಟೆಂಟ್ ಇರುವ ಗುಣಗಳು ಹೆಚ್ಚಿವೆ.
ಜೀರ್ಣಶಕ್ತಿಗೆ ಕರಿಬೇವು ಉತ್ತಮ ಮನೆ ಔಷಧ. ಕರಿಬೇವು ತಿನ್ನುವುದರಿಂದ ಅಜೀರ್ಣದ ಸಮಸ್ಯೆ ಬಗೆಹರಿಯುತ್ತದೆ. ಇನ್ನು ಹೊಟ್ಟೆಯೊಳಗಿನ ವಿಷಕಾರಿ ಅಂಶಗಳನ್ನು ತೆಗೆದು ಹಾಕಿ ಜೀರ್ಣ ಕ್ರಿಯೆಗೆ ಸಹಕಾರಿಯಾಗುತ್ತದೆ.
ಇನ್ನು ಆರೋಗ್ಯದ ಜೊತೆ ಕೂದಲಿಗೂ ಕೂಡ ಕರಿಬೇವು ಎಲೆಗಳು ಉತ್ತಮ ಔಷಧ. ಕರಿಬೇವು ತಿನ್ನೋದರಿಂದ ಬಿಳಿ ಕೂದಲಾಗುವುದು ಕಡಿಮೆಯಾಗುತ್ತದೆ. ಅಷ್ಟೆ ಅಲ್ಲ ಕೊಬ್ಬರಿ ಎಣ್ಣೆ ಜೊತೆ ಕರಿಬೇವನ್ನು ಹಾಕಿ, ಕುದಿಸಿ ತಲೆಗೆ ಹಚ್ಚುವುದರಿಂದ ರೇಷ್ಮೆಯಂತಹ ಕೂದಲು ನಿಮ್ಮದಾಗುತ್ತದೆ. ಹಾಗೂ ಕೂದಲುದುರುವುದನ್ನು ಕೂಡ ಕಡಿಮೆ ಮಾಡಬಹುದಾಗಿದೆ.
ಹೀಗೆ ಕರಿಬೇವು ಸಾಕಷ್ಟು ಔಷಧ ಗುಣಗಳನ್ನು ಹೊಂದಿದೆ. ಆದರೆ ಈ ಬಗ್ಗೆ ತಿಳಿಯದೇ ಇರುವ ನಾವು ಊಟದಲ್ಲಿ ಸಿಗುವ ಕರಿಬೇವಿನ ಎಲೆಗಳನ್ನು ಪಕ್ಕಕ್ಕಿಡುತ್ತೇವೆ.