ಸಾಮಾನ್ಯವಾಗಿ ಎಲ್ಲರ ಮನೆಗೂ ಫ್ರಿಜ್ ಬಂದಿದೆ. ಆಹಾರವನ್ನು ಹಾಳಾಗದಂತೆ ಇಡಲು ಫ್ರಿಜ್ ಬಳಕೆ ಮಾಡಲಾಗುತ್ತದೆ. ಕೆಲಸದ ಒತ್ತಡದ ಮಧ್ಯೆ ಆಹಾರ ತಯಾರಿಸುವುದು ಕಷ್ಟ ಎನ್ನುವ ಕಾರಣಕ್ಕೆ ಅನೇಕರು ಇಂದು-ನಿನ್ನೆಯ ಆಹಾರವನ್ನು ಫ್ರಿಜ್ ನಲ್ಲಿಟ್ಟು ನಂತ್ರ ಸೇವನೆ ಮಾಡ್ತಾರೆ.
ತರಕಾರಿ, ಹಣ್ಣುಗಳು ಹಾಳಾಗಬಾರದು ಎನ್ನುವ ಕಾರಣಕ್ಕೆ ಫ್ರಿಜ್ ನಲ್ಲಿ ಇಡಲಾಗುತ್ತದೆ. ಆದ್ರೆ ಕೆಲವೊಂದು ತರಕಾರಿ-ಹಣ್ಣುಗಳನ್ನು ಫ್ರಿಜ್ ನಲ್ಲಿ ಇಡುವುದ್ರಿಂದ ನಮ್ಮ ಆರೋಗ್ಯ ಹದಗೆಡುತ್ತದೆ.
ಬಾಳೆಹಣ್ಣನ್ನು ನೈಸರ್ಗಿಕ ಗಾಳಿಯಲ್ಲಿ ಇಡಬೇಕು. ಫ್ರಿಜ್ ನಲ್ಲಿಟ್ಟರೆ ಅದು ಶೀಘ್ರವೇ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಎಥಿಲೀನ್ ತೊಟ್ಟಿನಿಂದ ಹೊರಗೆ ಬರುತ್ತದೆ. ಫ್ರಿಜ್ ನಲ್ಲಿ ಬಾಳೆಹಣ್ಣು ಇಡುವುದು ಅತ್ಯಗತ್ಯವೆನಿಸಿದ್ರೆ ತೊಟ್ಟಿಗೆ ಪ್ಲಾಸ್ಟಿಕ್ ಕಟ್ಟಿ ಫ್ರಿಜ್ ನಲ್ಲಿಡಿ.
ಅನೇಕರು ಟೊಮೊಟೊವನ್ನು ಫ್ರಿಜ್ ನಲ್ಲಿ ಇಡುತ್ತಾರೆ. ಟೊಮೊಟೊ ಬೆಳೆಯಲು ಹೆಚ್ಚು ಸೂರ್ಯನ ಬೆಳಕು ಹಾಗೂ ನೀರು ಬೇಕು. ಇದನ್ನು ಅತಿ ಶೀತದಲ್ಲಿಟ್ಟರೆ ಅದು ಹಾಳಾಗುತ್ತದೆ.
ಸೇಬು ಹಣ್ಣನ್ನು ಕೂಡ ಫ್ರಿಜ್ ನಲ್ಲಿ ಇಡಬಾರದು. ಕಡಿಮೆ ತಾಪಮಾನದಲ್ಲಿ ಕಿಣ್ವಗಳು ಸಕ್ರಿಯಗೊಂಡು ಹಾಳಾಗುತ್ತದೆ. ಒಂದು ವೇಳೆ ಫ್ರಿಜ್ ನಲ್ಲಿ ಸೇಬು ಹಣ್ಣನ್ನು ಇಡಲು ಬಯಸಿದ್ರೆ ಕಾಗದವನ್ನು ಸುತ್ತಿ ಇಡಿ.
ಕಿತ್ತಳೆ, ನಿಂಬೆ ಹಣ್ಣುಗಳನ್ನು ಕೂಡ ಫ್ರಿಜ್ ನಲ್ಲಿ ಇಡಬೇಡಿ. ಈ ಹಣ್ಣುಗಳ ರಸ ಕಡಿಮೆಯಾಗುತ್ತದೆ. ಸಿಟ್ರಿಕ್ ಆಮ್ಲವಿರುವ ಹಣ್ಣುಗಳು ಹೆಚ್ಚು ಶೀತವನ್ನು ಸಹಿಸಿಕೊಳ್ಳುವುದಿಲ್ಲ. ರುಚಿಯೂ ಹಾಳಾಗುತ್ತದೆ.
ಬೆಳ್ಳುಳ್ಳಿಯನ್ನು ಫ್ರಿಜ್ ನಲ್ಲಿಟ್ಟರೆ ಕೆಲವೇ ದಿನಗಳಲ್ಲಿ ಮೊಳಕೆ ಬರಲು ಶುರುವಾಗುತ್ತದೆ. ಅದ್ರ ರುಚಿ ಕೂಡ ಹಾಳಾಗುತ್ತದೆ. ಬೆಳ್ಳುಳ್ಳಿ, ಈರುಳ್ಳಿಯನ್ನು ಒಟ್ಟಿಗೆ ಇಡಬಾರದು.