ಸೆಕ್ಸ್ ವೇಳೆ ಅನೇಕ ಮಹಿಳೆಯರು ಅಸಮಾನ್ಯ ನೋವನುಭವಿಸುತ್ತಾರೆ. ಸೆಕ್ಸ್ ವೇಳೆ ಕಾಣಿಸಿಕೊಳ್ಳುವ ನೋವು ಕೆಲಮೊಮ್ಮೆ ದೊಡ್ಡ ರೋಗಕ್ಕೆ ಕಾರಣವಾಗುತ್ತದೆ. ಸಂಭೋಗದ ವೇಳೆ ಕೆಲ ಮಹಿಳೆಯರಿಗೆ ರಕ್ತಸ್ರಾವವಾಗುವುದುಂಟು. ಇಂಥ ಸಂದರ್ಭದಲ್ಲಿ ವಿಳಂಬ ಮಾಡದೆ ವೈದ್ಯರನ್ನು ಭೇಟಿ ಮಾಡುವುದು ಒಳ್ಳೆಯದು.
ಸೆಕ್ಸ್ ವೇಳೆ ನೋವಾಗಲು ಅನೇಕ ಕಾರಣಗಳಿವೆ. ಇದು ಯೋನಿ ರೋಗದ ಒಂದು ಸಾಮಾನ್ಯ ವಿಧ. ಸಂಭೋಗದ ವೇಳೆ ಯೋನಿ ಅಸ್ವಸ್ಥಗೊಳ್ಳುತ್ತದೆ. ಇದ್ರಿಂದ ನೋವು ಕಾಡುತ್ತದೆ.
ಯೋನಿ ವಜಿನಾ ಶುಷ್ಕವಾಗಿದ್ದರೆ ಅಥವಾ ಸೋಂಕಿಗೆ ತುತ್ತಾಗಿದ್ದರೆ ಉರಿ, ತುರಿಕೆ ಸಾಮಾನ್ಯ. ಸೆಕ್ಸ್ ವೇಳೆ ಕೂಡ ಈ ನೋವು, ಉರಿ ಕಾಡುತ್ತದೆ.
ಖಿನ್ನತೆ, ಒತ್ತಡ ಕೂಡ ನೋವಿಗೆ ಕಾರಣವಾಗುತ್ತದೆ. ಕೆಲ ಮಹಿಳೆಯರು ವಯಸ್ಸಾದಂತೆ ಸಂಭೋಗದಲ್ಲಿ ಆಸಕ್ತಿ ಕಳೆದುಕೊಳ್ಳುತ್ತಾರೆ. ಈ ಬಗ್ಗೆ ಖಿನ್ನತೆಗೊಳಗಾಗ್ತಾರೆ. ಆಸಕ್ತಿಯಿಲ್ಲದೆ ಮಾಡುವ ಸೆಕ್ಸ್ ನೋವಿಗೆ ಕಾರಣವಾಗುತ್ತದೆ.
ಪೆಲ್ವಿಕ್ ಸಮಸ್ಯೆಯಿಂದ ಬಳಲುತ್ತಿರುವ ಮಹಿಳೆಯರಿಗೆ ಸಂಭೋಗದ ವೇಳೆ ನೋವು ಕಾಡುವುದು ಸಾಮಾನ್ಯ. ಸೆಕ್ಸ್ ನಂತ್ರ ಸೆಳೆತ, ನೋವು ಅಸಹನೀಯವಾಗಿರುತ್ತದೆ.