alex Certify ಪದೇ ಪದೇ ತಲೆನೋವು ಬರ್ತಿದ್ಯಾ…..? ಅಲಕ್ಷ್ಯ ಮಾಡಿದ್ರೆ ಅಪಾಯ ಗ್ಯಾರಂಟಿ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪದೇ ಪದೇ ತಲೆನೋವು ಬರ್ತಿದ್ಯಾ…..? ಅಲಕ್ಷ್ಯ ಮಾಡಿದ್ರೆ ಅಪಾಯ ಗ್ಯಾರಂಟಿ…..!

ತಲೆನೋವು ತುಂಬಾ ಕಾಮನ್‌. ಹಾಗಂತ ಅದನ್ನು ನಿರ್ಲಕ್ಷಿಸಬೇಡಿ. ಕೆಲವೊಮ್ಮೆ ತಲೆನೋವಿನ ಹಿಂದೆ ಬಹಳ ದೊಡ್ಡ ಕಾರಣವೇ ಇರಬಹುದು. ತಲೆನೋವು ನಿಮ್ಮ ಕೆಲಸದ ಮೇಲೂ ಪರಿಣಾಮ ಬೀರುತ್ತದೆ. ಹಾಗಾಗಿ ಪದೇ ಪದೇ ನಿಮಗೆ ತಲೆನೋವು ಬರ್ತಾ ಇದ್ರೆ ಕೂಡಲೇ ಎಚ್ಚೆತ್ತುಕೊಂಡು ಚಿಕಿತ್ಸೆ ಪಡೆಯುವುದು ಉತ್ತಮ. ಆಗಾಗ ಕಾಡುವ ತಲೆನೋವಿಗೆ ಕಾರಣವೇನು ಎಂಬುದನನು ನೋಡೋಣ.

ಶೀತ ಅಥವಾ ಜ್ವರ : ಶೀತ ಮತ್ತು ಜ್ವರವಿದ್ದರೆ ತಲೆನೋವು ಬರುತ್ತದೆ. ಅಂತಹ ಪರಿಸ್ಥಿತಿಯಲ್ಲಿ ತಕ್ಷಣ ವೈದ್ಯರನ್ನು ಭೇಟಿ ಮಾಡಬೇಕು. ಏಕೆಂದರೆ ಈ ಸಮಸ್ಯೆ ಹೆಚ್ಚಾಗಬಹುದು.

ಒತ್ತಡ: ಅನೇಕರು ಯಾವಾಗಲೂ ಒತ್ತಡವನ್ನು ಅನುಭವಿಸುತ್ತಾರೆ. ಇದರಿಂದ ತಲೆನೋವು ಉಂಟಾಗುತ್ತದೆ. ಒತ್ತಡವನ್ನು ಕಡಿಮೆ ಮಾಡಿಕೊಂಡು ಸಂತೋಷವಾಗಿರಲು ಪ್ರಯತ್ನಿಸಿ. ಚೆನ್ನಾಗಿ ನಿದ್ರಿಸಿ.

ಅತಿಯಾದ ಮದ್ಯ ಸೇವನೆ : ಕೆಲವರಿಗೆ ಪ್ರತಿದಿನ ಮದ್ಯಪಾನ ಮಾಡುವ ಅಭ್ಯಾಸವಿರುತ್ತದೆ. ಅಂಥವರಿಗೆ ತಲೆನೋವಿನ ಸಮಸ್ಯೆ ಹೆಚ್ಚಾಗಿರುತ್ತದೆ. ಹಾಗಾಗಿ ಮದ್ಯಪಾನ ಅಥವಾ ಧೂಮಪಾನದಿಂದ ದೂರವಿರಿ.

ಕಣ್ಣಿನ ತೊಂದರೆ: ಕಣ್ಣುಗಳಿಗೆ ಸಂಬಂಧಿಸಿದ ಸಮಸ್ಯೆಯಿದ್ದರೆ  ತಲೆನೋವು ಬರಬಹುದು. ಪ್ರತಿದಿನ ನಿಮಗೆ ತಲೆನೋವು ಬರ್ತಾ ಇದ್ರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ, ಕಣ್ಣುಗಳನ್ನೂ ಪರೀಕ್ಷೆ ಮಾಡಿಸಿಕೊಳ್ಳಿ.

ಡಿಹೈಡ್ರೇಶನ್:‌ ದೇಹದಲ್ಲಿ ನೀರಿನ ಕೊರತೆಯಿಂದಲೂ ತಲೆನೋವು ಬರಬಹುದು. ಹಾಗಾಗಿ ಚೆನ್ನಾಗಿ ನೀರು ಕುಡಿಯಿರಿ. ದೇಹವನ್ನು ಹೈಡ್ರೇಟ್‌ ಆಗಿಟ್ಟುಕೊಳ್ಳಿ.

ನೋವು ನಿವಾರಕ ಔಷಧಿಗಳು: ಪೇಯ್ನ್‌ ಕಿಲ್ಲರ್‌ಗಳ ಸೇವನೆಯಿಂದ ಅನೇಕ ರೀತಿಯ ದುಷ್ಪರಿಣಾಮಗಳಿವೆ. ನೋವು ನಿವಾರಕಗಳ ಅತಿಯಾದ ಸೇವನೆಯಿಂದಾಗಿ ಜನರು ತಲೆನೋವಿನಿಂದ  ಬಳಲುತ್ತಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...