alex Certify ʼಮಧುಮೇಹʼ ಇದೆಯಾ..…? ʼಎಳನೀರುʼ ಕುಡಿಯಿರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಮಧುಮೇಹʼ ಇದೆಯಾ..…? ʼಎಳನೀರುʼ ಕುಡಿಯಿರಿ

ಮಧುಮೇಹ ಈಗ ಬಹುತೇಕ ಎಲ್ಲರನ್ನೂ ಕಾಡುತ್ತಿರುವ ಖಾಯಿಲೆ. ಡಯಾಬಿಟಿಸ್ ಬಂದ್ರೆ ದೀರ್ಘಕಾಲದ ವರೆಗೆ ನರಕಯಾತನೆ ಅನುಭವಿಸಬೇಕಾಗುತ್ತದೆ. ಆಗಾಗ್ಗೆ ಮೂತ್ರ ವಿಸರ್ಜನೆ ಮಾಡಬೇಕು.  ಆಯಾಸ, ತೂಕದಲ್ಲಿ ಇಳಿಕೆ, ದೃಷ್ಟಿ ಮಸುಕಾಗುವುದು ಹೀಗೆ ಹಲವು ಬಗೆಯ ಸಮಸ್ಯೆಗಳು ಶುರುವಾಗುತ್ತವೆ.

ಮೇದೋಜೀರಕ ಗ್ರಂಥಿಯು ಇನ್ಸುಲಿನ್ ಎಂಬ ಸಕ್ಕರೆ ನಿಯಂತ್ರಣ ಹಾರ್ಮೋನ್ ಉತ್ಪಾದನೆಯನ್ನು ನಿಲ್ಲಿಸಿದಾಗ ಅಥವಾ ನಿಮ್ಮ ದೇಹವು ರಾಸಾಯನಿಕಕ್ಕೆ ನಿರೋಧಕವಾದಾಗ ಡಯಾಬಿಟಿಸ್ ಕಾಣಿಸಿಕೊಳ್ಳುತ್ತದೆ. ಸಕ್ಕರೆ  ವಾಸ್ತವವಾಗಿ ಮಾನವ ದೇಹಕ್ಕೆ ಶಕ್ತಿಯ ಮೂಲವಾಗಿದೆ.

ವೃದ್ಧಾಪ್ಯ, ಜಡ ಜೀವನ ಶೈಲಿ, ಬೊಜ್ಜು, ಅಧಿಕ ರಕ್ತದೊತ್ತಡ ಮುಂತಾದ ಕೆಲವು ಅಂಶಗಳು ಕೂಡ ಮಧುಮೇಹ ಬರಲು ಕಾರಣವಾಗುತ್ತವೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆಯದೇ ಇದ್ದಲ್ಲಿ  ನರಗಳಿಗೆ, ಮೂತ್ರಪಿಂಡಗಳಿಗೆ ಹಾನಿಯಾಗಬಹುದು. ಹೃದಯ ಸಂಬಂಧಿ ಕಾಯಿಲೆಗಳಿಗೆ  ಕಾರಣವಾಗಬಹುದು.

ಸಕ್ಕರೆ ಖಾಯಿಲೆ ಪೀಡಿತರು ಎಳನೀರು ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಕೃತಕ ಸಿಹಿಕಾರಕವಿಲ್ಲದ ಎಳನೀರು ದೇಹದಲ್ಲಿರುವ ಎಲೆಕ್ಟ್ರೋಲೈಟ್ ಅನ್ನು ನಿಯಂತ್ರಣದಲ್ಲಿಡಲು ಸಹಕರಿಸುತ್ತದೆ. ಅಗತ್ಯ ಪೋಷಕಾಂಶಗಳಾದ ಪೊಟ್ಯಾಸಿಯಮ್, ಸೋಡಿಯಂ, ಸತು, ಕಬ್ಬಿಣ, ತಾಮ್ರ ಇತ್ಯಾದಿಗಳನ್ನು ಒಳಗೊಂಡಿರುವ ಈ  ಪಾನೀಯ ನಿಮ್ಮನ್ನು ಆರೋಗ್ಯವಾಗಿರಿಸುತ್ತದೆ.

ಎಳನೀರು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರವಾಗಿರಿಸಬಲ್ಲದು. ಎಳನೀರಿನಲ್ಲಿ ನೈಸರ್ಗಿಕ ಸಕ್ಕರೆ ಅಂಶವಿದೆ. ಅದು ರಕ್ತದಲ್ಲಿನ ಗ್ಲೂಕೋಸ್ ಮಟ್ಟದಲ್ಲಿ ಹಠಾತ್ ಏರಿಕೆಯನ್ನು ತಡೆಯುತ್ತದೆ. ಹೃದಯ ಸಂಬಂಧಿ ಖಾಯಿಲೆಗಳು ಬರದಂತೆ ತಡೆಯುತ್ತದೆ. ಎಳನೀರಿನಲ್ಲಿರೋ ಪೊಟಾಶಿಯಂ ಮೂತ್ರಪಿಂಡದ ಕಾರ್ಯವನ್ನು ನಿಯಂತ್ರಿಸುತ್ತದೆ, ಅದಕ್ಕೆ ಹಾನಿಯಾಗದಂತೆ ತಡೆಯುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...