alex Certify ಅಸ್ತಮಾ ಸಮಸ್ಯೆಯಿದೆಯಾ…..? ನಿವಾರಣೆಗೆ ಇಲ್ಲಿದೆ ಮನೆ ಮದ್ದು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಸ್ತಮಾ ಸಮಸ್ಯೆಯಿದೆಯಾ…..? ನಿವಾರಣೆಗೆ ಇಲ್ಲಿದೆ ಮನೆ ಮದ್ದು

ಅಸ್ತಮಾ ಸಮಸ್ಯೆ ಹಲವರನ್ನು ಕಾಡುತ್ತದೆ. ಅದರಲ್ಲಿಯೂ ಚಳಿಗಾಲ ಆರಂಭವಾಯಿತೆಂದರೆ ಈ ಸಮಸ್ಯೆ ಉಲ್ಬಣಗೊಳ್ಳುವುದು ಸಾಮಾನ್ಯ. ಅಧ್ಯಯನದ ಪ್ರಕಾರ ಪ್ರತಿ 12 ಜನರಲ್ಲಿ ಒಬ್ಬರು ಅಸ್ತಮಾದಿಂದ ಬಳಲುತ್ತಾರೆ ಎನ್ನಲಾಗಿದೆ.

ಅಸ್ತಮಾ ಸಮಸ್ಯೆಯಿರುವ ಬಹುತೇಕ ಜನರು ಆಸ್ತಾಲಿನ್, ಇನ್ ಹೇಲರ್ ಮೇಲೆ ಡಿಪೆಂಡ್ ಆಗಿರುತ್ತಾರೆ. ಆದರೆ ಆಸ್ತಮಾ ಸಮಸ್ಯೆಯನ್ನು ಮನೆ ಮದ್ದಿನ ಮೂಲಕವೂ ಸುಲಭವಾಗಿ ಪರಿಹರಿಸಿಕೊಳ್ಳಬಹುದು.

ಶುಂಠಿ: ಶುಂಠಿಯನ್ನು ಹೆಚ್ಚಾಗಿ ಬಳಸುವುದರಿಂದ, ಶುಂಠಿ ಕಷಾಯ, ಶುಂಠಿ ನೀರು ಸೇವನೆಯಿಂದಾಗಿ ಅಸ್ತಮಾ ಲಕ್ಷಣಗಳು ಕಡಿಮೆಯಾಗುತ್ತದೆ.

ಅರಿಷಿಣ: ಅರಿಷಿಣ ಅಡುಗೆ ಮನೆಯಲ್ಲಿ ಬೇಗನೇ ಕೈಗೆ ಸಿಗುವ ಮತ್ತೊಂದು ಆರೋಗ್ಯಕಾರಿ ಪದಾರ್ಥ. ಬಿಸಿ ನೀರಿನಲ್ಲಿ ಸ್ವಲ್ಪ ಅರಿಷಿಣ ಬೆರೆಸಿ ಕುಡಿಯುವುದರಿಂದ ಉಸಿರಾಟವನ್ನು ಸರಾಗವಾಗಿ ಮಾಡಲು ಸಹಾಯಕಾರಿಯಾಗುತ್ತದೆ. ಕಫದಂತಹ ಸಮಸ್ಯೆಯನ್ನು ಇದು ಶಮನ ಮಾಡುತ್ತದೆ.

ಜೇನುತುಪ್ಪ: ಇದು ಅಸ್ತಮಾ ರೋಗಿಗಳಿಗೆ ಹೆಚ್ಚು ಉಪಯುಕ್ತ. ಅಸ್ತಮಾದಿಂದ ಬರುವ ಅಲರ್ಜಿ, ಸೋಂಕಿನಂತಹ ಅಪಾಯವನ್ನು ನಿವಾರಿಸಬಲ್ಲದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...