ಸ್ವಲ್ಪ ಸ್ವಲ್ಪ ಹಣ ಉಳಿಸಿ ಇರುವುದಕ್ಕೊಂದು ಸೂರು ಕಟ್ಟಿಕೊಳ್ಳುವ ಆಸೆ ಪಟ್ಟವರಲ್ಲಿ ನೀವೂ ಒಬ್ಬರೇ..? ಹಾಗಾದ್ರೆ ಇದನ್ನು ಸ್ವಲ್ಪ ಓದಿ.
ಮನೆ ಕಟ್ಟಬೇಕು ಎಂಬ ಆಸೆ ಎಲ್ಲರಿಗೂ ಇರುತ್ತದೆ. ಆದರೆ ಕಟ್ಟುವುದಕ್ಕೆ ಸರಿಯಾಗಿ ಜಾಗ, ಹಣದ ವ್ಯವಸ್ಥೆ ಆಗಬೇಕು.ಇನ್ನು ಇಷ್ಟೆಲ್ಲಾ ಇದ್ದು ನೀವು ಮನೆ ಕಟ್ಟುವುದಕ್ಕೆ ಹೊರಟಿದ್ದರೆ ಮೊದಲು ಸರಿಯಾದ ಪ್ಲ್ಯಾನ್ ಮಾಡಿಕೊಳ್ಳಿ. ಎಷ್ಟು ಜಾಗವಿದೆ ನಿಮಗೆ ಎಷ್ಟು ದೊಡ್ಡ ಮನೆಯ ಅವಶ್ಯಕತೆ ಇದೆ ಎಂಬುದನ್ನು ಮೊದಲೇ ನಿರ್ಧರಿಸಿ.
ಜಾಗವಿದೆ ಎಂದು ದೊಡ್ಡ ಮನೆ ಕಟ್ಟಿ ಅದನ್ನು ನಿರ್ವಹಣೆ ಮಾಡುವುದೇ ಕಷ್ಟವಾಗಬಾರದು. ಜತೆಗೆ ಮನೆಗೆ ಸುರಿದ ದುಡ್ಡಿನಿಂದ ಏನೂ ಲಾಭ ಕೂಡ ಇರಲ್ಲ. ಹಾಗಾಗಿ ನಿಮಗೆ ನೆಮ್ಮದಿಯಾಗಿ ಬದುಕುವುದಕ್ಕೆ ಹೇಗೆ ಇರಬೇಕೋ ಹಾಗೇ ಕಟ್ಟಿ.
ಇನ್ನು ಮನೆ ಕಟ್ಟುವಾಗ ಸಾವಿರ ಜನ ಸಾವಿರ ಐಡಿಯಾ ಕೊಡುತ್ತಾರೆ. ಯಾವುದನ್ನೂ ತಲೆಗೆ ತೆಗೆದುಕೊಳ್ಳದೇ ನಿಮ್ಮ ಕನಸಿನ ಮನೆ ಹೇಗಿರಬೇಕೊ ಹಾಗೇ ಕಟ್ಟಿಕೊಳ್ಳಿ. ಇನ್ನೊಬ್ಬರ ಐಡಿಯಾ ತೆಗೆದುಕೊಂಡು ಮನೆ ಕಟ್ಟುವುದಕ್ಕೆ ಹೋದರೆ ಖರ್ಚು ಜಾಸ್ತಿ, ಜತೆಗೆ ನೀವಂದುಕೊಂಡ ಹಾಗೇ ಕಟ್ಟುವುದಕ್ಕೆ ಆಗುವುದಿಲ್ಲ.
ನಿಮ್ಮ ಬಜೆಟ್ ಎಷ್ಟು, ಯಾವಾಗ ಮುಗಿಸಬೇಕು, ಯಾವ ಮೆಟಿರಿಯಲ್ ಗೆ ಎಷ್ಟು ಹಣ ವ್ಯಯಿಸಬೇಕು ಎಂಬಿತ್ಯಾದಿ ವಿಷಯಗಳನ್ನು ಪಟ್ಟಿ ಮಾಡಿಕೊಂಡು ಮನೆ ಕಟ್ಟುವುದಕ್ಕೆ ಶುರು ಮಾಡಿದರೆ ಟೆನ್ಷನ್ ಫ್ರೀ ಆಗುತ್ತಿರಿ.