ಟೊಮೆಟೋ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ವಿಟಮಿನ್ ಸಿ, ಪೊಟ್ಯಾಸಿಯಮ್ ಮತ್ತು ಲೈಕೋಪೀನ್ ಇದರಲ್ಲಿ ಹೇರಳವಾಗಿ ಕಂಡುಬರುತ್ತದೆ. ಹಾಗಂತ ಅತಿಯಾಗಿ ತಿಂದರೆ ಟೊಮೆಟೋ ಕೂಡ ಅಪಾಯಕಾರಿಯೇ. ದಿನದಲ್ಲಿ 1-2 ಟೊಮೆಟೋಗಳನ್ನು ಹೆಚ್ಚು ತಿಂದರೆ ಆರೋಗ್ಯ ಹದಗೆಡುತ್ತದೆ.
ಅಸಿಡಿಟಿ ಸಮಸ್ಯೆ
ಟೊಮೆಟೊ ನೈಸರ್ಗಿಕವಾಗಿ ಆಮ್ಲವನ್ನು ಹೊಂದಿರುತ್ತದೆ, ಇದು ಹುಳಿ ರುಚಿಯನ್ನು ನೀಡುತ್ತದೆ. ಹೆಚ್ಚು ಟೊಮೆಟೊಗಳನ್ನು ತಿನ್ನುವುದರಿಂದ ಹೊಟ್ಟೆಯಲ್ಲಿ ಆಮ್ಲದ ಪ್ರಮಾಣ ಹೆಚ್ಚಾಗುತ್ತದೆ. ಇದು ಎದೆಯುರಿ, ವಾಯು ಮತ್ತು ಅಜೀರ್ಣದಂತಹ ಸಮಸ್ಯೆಗಳನ್ನು ಉಂಟುಮಾಡಬಹುದು. ಈಗಾಗಲೇ ಅಸಿಡಿಟಿ ಸಮಸ್ಯೆ ಇದ್ದರೆ ಟೊಮೆಟೊವನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಿ.
ಕಿಡ್ನಿಯಲ್ಲಿ ಕಲ್ಲು
ಆಕ್ಸಲೇಟ್ ಎಂಬ ಅಂಶವು ಟೊಮೆಟೊದಲ್ಲಿ ಕಂಡುಬರುತ್ತದೆ. ದೇಹದಲ್ಲಿ ಹೆಚ್ಚಿನ ಪ್ರಮಾಣದ ಆಕ್ಸಲೇಟ್ ಸಂಗ್ರಹವಾಗುವುದರಿಂದ ಮೂತ್ರಪಿಂಡದ ಕಲ್ಲುಗಳ ಅಪಾಯ ಹೆಚ್ಚಾಗುತ್ತದೆ. ಈಗಾಗಲೇ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವವರು ಟೊಮೆಟೋ ಸೇವನೆಗೂ ಮುನ್ನ ವೈದ್ಯರ ಸಲಹೆ ಪಡೆಯುವುದು ಉತ್ತಮ.
ಕೀಲು ನೋವು
ಟೊಮೆಟೋ ಸೇವನೆಯಿಂದ ಕೆಲವರಿಗೆ ಕೀಲು ನೋವು ಕಾಣಿಸಿಕೊಳ್ಳಬಹುದು. ಏಕೆಂದರೆ ಟೊಮೆಟೋ ಉರಿಯೂತವನ್ನು ಉಂಟುಮಾಡುವ ಕೆಲವು ಅಂಶಗಳನ್ನು ಹೊಂದಿರುತ್ತದೆ. ಕೀಲು ನೋವು ಇದ್ದರೆ ಸೇವನೆ ಮಿತವಾಗಿರಲಿ.
ಚರ್ಮದ ಸಮಸ್ಯೆ
ಹೆಚ್ಚು ಟೊಮೆಟೋ ಸೇವನೆ ಚರ್ಮದ ಮೇಲೆ ಪರಿಣಾಮ ಬೀರುತ್ತದೆ. ಲೈಕೋಪೀನ್ ಅಧಿಕವಾಗಿರುವ ಕಾರಣ ಚರ್ಮದ ಬಣ್ಣ ಹಳದಿಯಾಗಬಹುದು. ಆದರೆ ಈ ಸಮಸ್ಯೆಯು ಸಾಮಾನ್ಯವಾಗಿ ಗಂಭೀರವಾಗಿರುವುದಿಲ್ಲ, ಟೊಮೆಟೋ ಕಡಿಮೆ ತಿಂದರೆ ಗುಣವಾಗುತ್ತದೆ.
ಅತಿಸಾರದ ಅಪಾಯ
ಸಾಲ್ಮೊನೆಲ್ಲಾ ಎಂಬ ಬ್ಯಾಕ್ಟೀರಿಯಾ ಟೊಮೆಟೋದಲ್ಲಿ ಇರುತ್ತದೆ. ಟೊಮೆಟೋವನ್ನು ಸರಿಯಾಗಿ ತೊಳೆದು ತಿನ್ನದಿದ್ದರೆ ಅದು ಅತಿಸಾರದ ಅಪಾಯವನ್ನು ಹೆಚ್ಚಿಸುತ್ತದೆ. ಆದ್ದರಿಂದ ಟೊಮೆಟೊಗಳನ್ನು ತಿನ್ನುವ ಮೊದಲು ಚೆನ್ನಾಗಿ ತೊಳೆಯಿರಿ.