ಕಚೇರಿಯಲ್ಲಿರುವ ಕಾಗದ, ಪೆನ್, ಕ್ಯಾಂಟೀನ್ ನಲ್ಲಿ ಚಮಚ ಕದಿಯುವ ಅಭ್ಯಾಸ ಅನೇಕರಿಗಿರುತ್ತದೆ. ಸಮೀಕ್ಷೆಯಲ್ಲಿ ಅನೇಕ ನೌಕರರು ಇದಕ್ಕೆ ಯಸ್ ಎಂದು ಉತ್ತರಿಸಿದ್ದಾರೆ. ಸಮೀಕ್ಷೆಯಲ್ಲಿ ಭಾಗಿಯಾಗಿರುವ ಶೇಕಡಾ 100ರಷ್ಟು ಮಂದಿ ಕಚೇರಿಯ ವಸ್ತುಗಳನ್ನು ಕದ್ದಿರುವುದಾಗಿ ಹೇಳಿದ್ದಾರೆ. ಇದಕ್ಕೆ ಕಾರಣವೇನು ಎಂಬುದನ್ನೂ ಸಮೀಕ್ಷೆಯಲ್ಲಿ ಹೇಳಲಾಗಿದೆ.
ಇನ್ನೊಂದು ಸಮೀಕ್ಷೆಯಲ್ಲಿ ಶೇಕಡಾ 75ರಷ್ಟು ಮಂದಿ ಕಚೇರಿ ವಸ್ತುಗಳನ್ನು ಕದಿಯುವುದಾಗಿ ಒಪ್ಪಿಕೊಂಡಿದ್ದಾರೆ. ಕೆಲಸಕ್ಕೆ ಸೇರುವ ವೇಳೆ ಕಂಪನಿಗಳು ಭರವಸೆಯನ್ನು ನೀಡುತ್ತವೆ. ಆದ್ರೆ ಒಂದು ವರ್ಷವಾದ್ಮೇಲೆ ನೀಡಿದ ಭರವಸೆಯನ್ನು ಈಡೇರಿಸುವುದಿಲ್ಲ. ಇದ್ರಿಂದ ನೌಕರರು ಬೇಸರಗೊಳ್ತಾರೆ. ಕಂಪನಿಗೆ ಅವರು ನೀಡುವ ಗೌರವ ಕೂಡ ಕಡಿಮೆಯಾಗುತ್ತದೆ.
ಕಂಪನಿ ನೌಕರರಿಗೆ ಸೌಲಭ್ಯ ನೀಡದೆ ಹೋದಾಗ ನೌಕರರು ಕಂಪನಿಗೆ ಮೋಸ ಮಾಡಲು ಶುರು ಮಾಡ್ತಾರೆ. ನಿಧಾನವಾಗಿ ನೌಕರರ ನಡವಳಿಕೆ ಬದಲಾಗುತ್ತದೆ. ಅನಗತ್ಯ ರಜೆ ತೆಗೆದುಕೊಳ್ಳಲು ಶುರು ಮಾಡ್ತಾರೆ. ಕಂಪನಿ ವಿರುದ್ಧ ಸೇಡು ತೀರಿಸಿಕೊಳ್ಳಲು ಮುಂದಾಗ್ತಾರೆ. ಹಾಗಾಗಿ ಕಚೇರಿ ವಸ್ತುಗಳನ್ನು ಕದಿಯಲು ಶುರು ಮಾಡ್ತಾರೆ. ಕಂಪನಿಗಳು ಕೂಡ ಇದನ್ನು ಒಪ್ಪಿಕೊಂಡಿದೆ.