ಚಿಕ್ಕ ಮಕ್ಕಳಿಗೆ ಹುಳಿ ಹುಳಿ ಚಾಕಲೇಟ್ ಅಂದ್ರೆ ಇಷ್ಟ. ನೀವು ಕೂಡ ನಿಮ್ಮ ಮಗುವಿಗೆ ಈ ಹುಳಿ ಹುಳಿ ಕ್ಯಾಂಡಿಯನ್ನು ತಿನ್ನಲು ಕೊಡ್ತಿದ್ದೀರಾ? ಹಾಗಾದ್ರೆ ಇದನ್ನು ತಪ್ಪದೇ ಓದಿ. ಈ ಕ್ಯಾಂಡಿ ಬ್ಯಾಟರಿ ಆಸಿಡ್ ನಷ್ಟೇ ಅಪಾಯಕಾರಿ. ಕೇವಲ ಹಲ್ಲುಗಳಿಗೆ ಮಾತ್ರವಲ್ಲ ಆರೋಗ್ಯಕ್ಕು ಕುತ್ತು ತರುತ್ತದೆ.
ಈ ಕ್ಯಾಂಡಿಗಳನ್ನು ನೋಡಿದ ತಕ್ಷಣ ಎಂಥವರಿಗೂ ತಿನ್ನಬೇಕು ಅನ್ನೋ ಆಸೆಯಾಗೋದು ಸಹಜ. ಯಾಕಂದ್ರೆ ಅವು ಅಷ್ಟು ಕಲರ್ಫುಲ್ಲಾಗಿರುತ್ತವೆ. ಆದ್ರೆ ಈ ಕೃತಕ ಬಣ್ಣಗಳು ನಿಮ್ಮ ಜೀರ್ಣಾಂಗ ವ್ಯೂಹಕ್ಕೇ ಅಪಾಯ ತರುತ್ತವೆ. ನಾಲಿಗೆ ಮೇಲೆ ಗುಳ್ಳೆಗಳು ಏಳುತ್ತವೆ.
ಶುಗರ್ ಕ್ಯಾಂಡಿಗಳಲ್ಲಿ ಎಲ್ಲವೂ ಅತಿಯಾಗಿಯೇ ಇರುತ್ತದೆ. ಇದರಲ್ಲಿರೋ ಸಕ್ಕರೆ, ರಾಸಾಯನಿಕಗಳೆಲ್ಲ ನಿಮ್ಮ ಹಲ್ಲುಗಳಿಗೆ ಮಾರಕ. ಕ್ಯಾಂಡಿಗಳಲ್ಲಿ ಆ್ಯಸಿಡ್ ಅಂಶ ಹೆಚ್ಚಾಗಿ Ph ಲೆವಲ್ ಕಡಿಮೆ ಇರುವುದರಿಂದ ಒಸಡು ಮತ್ತು ಕೆನ್ನೆಗಳು ಸುಡುತ್ತವೆ.
ಕ್ಯಾಂಡಿಗಳಿಗೆ ಬಳಸುವ ಕೃತಕ ಬಣ್ಣ ಮೆದುಳಿಗೆ ಅಪಾಯ ಉಂಟುಮಾಡುತ್ತದೆ. ನೀವು ಹುಳಿ ಮಿಠಾಯಿಗಳನ್ನು ತಿನ್ನುವಾಗ, ರುಚಿ ಗ್ರಾಹಕಗಳು ರಾಸಾಯನಿಕ ಸಂಯುಕ್ತವನ್ನು ಬಿಡುಗಡೆ ಮಾಡುತ್ತವೆ, ಅದು ಮಿಠಾಯಿಗಳ ಬಣ್ಣದ ರಾಸಾಯನಿಕಗಳೊಂದಿಗೆ ಬೆರೆತುಹೋಗುತ್ತದೆ. ಮಕ್ಕಳು ನಿಯಮಿತವಾಗಿ ಸೇವಿಸಿದರೆ, ನೆನಪಿನ ಶಕ್ತಿ ಕುಂದಬಹುದು. ಮೆದುಳಿನ ಕಾರ್ಯನಿರ್ವಹಣೆಗೆ ಅಡ್ಡಿಯಾಗಬಹುದು.
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಈ ಹುಳಿ ಮಿಠಾಯಿಗಳಲ್ಲಿ ಗ್ಲೈಸಿರೈಜಿಕ್ ಆಮ್ಲ ಎಂಬ ಸಕ್ರಿಯ ಘಟಕಾಂಶವನ್ನು ಬಳಸಲಾಗುತ್ತದೆ. ಇದು ಅಧಿಕ ರಕ್ತದೊತ್ತಡ ಮತ್ತು ಮೆದುಳಿನ ಊತಕ್ಕೆ ಕಾರಣವಾಗುತ್ತದೆ.
ಕ್ಯಾಂಡಿಗಳಲ್ಲಿರೋ ಆ್ಯಸಿಡ್ ಅಂಶ ನಾಲಿಗೆಗೆ ಅಪಾಯಕಾರಿ. ನಾಲಿಗೆ ಮೇಲೆ ಗುಳ್ಳೆಗಳೇಳಬಹುದು. ದಿನನಿತ್ಯ ಮಕ್ಕಳು ಈ ಕ್ಯಾಂಡಿ ತಿಂದ್ರೆ ನಾಲಿಗೆ ಒಡೆದು ರಕ್ತ ಒಸರುವ ಸಾಧ್ಯತೆಯೂ ಇರುತ್ತದೆ.
ಈ ಕಲರ್ಫುಲ್ ಕ್ಯಾಂಡಿಗಳನ್ನು ಪ್ಯಾಕ್ ಮಾಡಲು ಬಳಸುವ ಪ್ಲಾಸ್ಟಿಕ್ ನಲ್ಲಿ ಅಪಾಯಕಾರಿ ಸೂಕ್ಷ್ಮಾಣುಗಳಿರುತ್ತವೆ. ಇವು ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನೇ ಹಾಳುಮಾಡಬಹುದು. ಈ ಸೂಕ್ಷ್ಮಾಣುಗಳು ಕ್ಯಾಂಡಿ ಜೊತೆ ಸಂಪರ್ಕಕ್ಕೆ ಬಂದಾಗ ಅತ್ಯಂತ ಅಪಾಯಕಾರಿಯಾಗಿ ಪರಿಣಮಿಸುತ್ತವೆ.