ಕ್ರೋಧ, ಸಿಟ್ಟು ಮನುಷ್ಯನ ಸಹಜ ಭಾವನೆಗಳಲ್ಲಿ ಒಂದು. ಕೆಲವರು ಅದನ್ನು ವ್ಯಕ್ತಪಡಿಸಿದ್ರೆ ಇನ್ನು ಕೆಲವರು ಈ ಸಿಟ್ಟನ್ನು ಒಳಗೆ ನುಂಗಿಬಿಡ್ತಾರೆ. ಆದ್ರೆ ಇತ್ತೀಚಿನ ಅಧ್ಯಯನದ ಪ್ರಕಾರ ಸಿಟ್ಟನ್ನು ಅದುಮಿಟ್ಟರೆ ಜೀವಕ್ಕೆ ಕುತ್ತು ಬರುತ್ತದೆಯಂತೆ.
ಇದು ಮೆದುಳಿನ ಮೇಲೂ ಅಡ್ಡ ಪರಿಣಾಮ ಬೀರುತ್ತದೆಯಂತೆ. ಯುನಿವರ್ಸಿಟಿ ಆಫ್ ಪಿಟರ್ಸ್ ಬರ್ಗ್ ಅವರ ಅಧ್ಯಯನದ ಪ್ರಕಾರ ಉಕ್ಕಿ ಬರುವ ಸಿಟ್ಟನ್ನು ಹೊರಗೆ ಹಾಕುವುದು ಅತ್ಯಗತ್ಯ, ಕೋಪವನ್ನು ನುಂಗಿ ಹಾಕಿಕೊಂಡ್ರೆ ಮಾನಸಿಕವಾಗಿ ಕುಗ್ಗುವ ಸಮಸ್ಯೆಯಿರುತ್ತದೆ. ಬ್ರೇನ್ ಸ್ಟ್ರೋಕ್ ಆಗುವ ಸಾಧ್ಯತೆಯೂ ಇದೆ. ಮಹಿಳೆಯರು ಕೋಪ ಅದುಮಿಟ್ಟುಕೊಂಡರೆ ಅಪಧಮನಿಗಳಲ್ಲಿ ಹಂತ ಹಂತವಾಗಿ ಕಲ್ಮಶ ಸಂಗ್ರಹವಾಗುತ್ತದೆಯಂತೆ.
ಸಿಟ್ಟಿನಿಂದ ಉಂಟಾಗುವ ಒತ್ತಡ ನೇರವಾಗಿ ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ. ಸಿಟ್ಟು ಬಂದಾಗ ಉಸಿರಾಟದಲ್ಲಿ ಏರಿಳಿತಗಳು ಕಾಣಿಸುತ್ತವೆ. ಮೆದುಳಿನ ಊತ, ಹಾರ್ಟ್ ಅಟ್ಯಾಕ್, ಬ್ರೇನ್ ಸ್ಟ್ರೋಕ್, ಎದೆ ನೋವಿನಂತ ಸಮಸ್ಯೆ ಕಾಡುತ್ತದೆ. ಹಾಗಾಗಿ ಸಿಟ್ಟನ್ನು ಅದುಮಿಟ್ಟುಕೊಳ್ಳದೆ ಹೊರಗೆ ಹಾಕಿ.