ಊಟವಾದ ನಂತರ ನಿದ್ದೆ ಬರುವುದು ಸ್ವಾಭಾವಿಕ. ಕೆಲವು ವೈದ್ಯರು ಹೇಳುವ ಪ್ರಕಾರ ಪ್ರತಿ ಬಾರಿಯೂ ಊಟದ ನಂತರ ಸುಸ್ತಾಗುವುದು, ತೀವ್ರ ನಿದ್ರೆ ಬರುವುದು ಫುಡ್ ಕೋಮಾದ ಲಕ್ಷಣ ಆಗಿರಬಹುದು.
ಫುಡ್ ಕೋಮಾವನ್ನು Postprandial Somnolence ಎಂಬ ಹೆಸರಿನಿಂದಲೂ ಕರೆಯುತ್ತಾರೆ. ಇದಕ್ಕೆ ಒಳಗಾದವರಿಗೆ ಸುಸ್ತು, ನಿದ್ರೆ, ಏಕಾಗ್ರತೆಯ ಕೊರತೆ ಉಂಟಾಗುತ್ತದೆ.
ಸಕ್ಕರೆ ಪ್ರಮಾಣ ಹೆಚ್ಚಿಗೆ ಹೊಂದಿರುವ ರಿಫೈಂಡ್ ಫುಡ್ ಮತ್ತು ರಿಫೈಂಡ್ ಕಾರ್ಬೋಹೈಡ್ರೇಡ್ ಗ್ಲುಕೋಜ್ ಮಟ್ಟವನ್ನು ಒಮ್ಮೆಲೇ ಹೆಚ್ಚಿಸುತ್ತದೆ. ಇದರಿಂದ ಸುಸ್ತಾಗುತ್ತದೆ. ಇದಲ್ಲದೆ ಎಷ್ಟು ಆಹಾರ ಸೇವಿಸುತ್ತೀರಿ ಎಂಬುದರ ಮೇಲೂ ಫುಡ್ ಕೋಮಾ ಅವಲಂಬಿಸಿದೆ. ಕಡಿಮೆ ಹಸಿವಾದಾಗ ಹೆಚ್ಚಿನ ಆಹಾರ ಸೇವಿಸಿದಲ್ಲಿ ಕೂಡ ಫುಡ್ ಕೋಮಾ ಹೆಚ್ಚಾಗಬಹುದು.
ಥೈರಾಯಿಡ್ ಪ್ರಮಾಣ ಕಡಿಮೆ ಇದ್ದಲ್ಲಿ ಫುಡ್ ಕೋಮಾ ಬರುವ ಸಾಧ್ಯತೆ ಇರುತ್ತದೆ. ಇನ್ನು ಕೆಲವರಿಗೆ ಕೆಲವು ಪದಾರ್ಥಗಳ ಸೇವನೆಯಿಂದ ಅಲರ್ಜಿ ಉಂಟಾಗುತ್ತದೆ. ಇದು ಸ್ವತಃ ಅವರಿಗೂ ತಿಳಿದಿರುವುದಿಲ್ಲ. ಇದರ ಪರಿಣಾಮ ಫುಡ್ ಕೋಮಾ ಉಂಟಾಗಬಹುದು. ಫುಡ್ ಕೋಮಾ ವಿಟಮಿನ್ ಬಿ 12, ಐರನ್ ಅಥವಾ ಫೈಬರ್ ಕೊರತೆಯಿಂದಲೂ ಆಗುತ್ತದೆ.