ನೀರು, ಆಹಾರದಂತೆ ನಮಗೆ ನಿದ್ರೆ ಕೂಡ ಬಹಳ ಮುಖ್ಯ. ಪ್ರತಿ ದಿನ ಕನಿಷ್ಠ 7 ಗಂಟೆ ನಿದ್ರೆ ಮಾಡಬೇಕು. ಅನೇಕರಿಗೆ ಹಾಸಿಗೆಗೆ ಹೋಗಿ ಒಂದು ಗಂಟೆಯಾದ್ರೂ ಸರಿಯಾಗಿ ನಿದ್ರೆ ಬರುವುದಿಲ್ಲ. ಮತ್ತೆ ಕೆಲವರು ಹಾಸಿಗೆಗೆ ಹೋದ ತಕ್ಷಣ ನಿದ್ರೆ ಮಾಡ್ತಾರೆ. ಹಾಸಿಗೆಗೆ ಹೋದ ತಕ್ಷಣ ನಿದ್ರೆ ಮಾಡುವುದು ಕೂಡ ರೋಗದ ಲಕ್ಷಣವಾಗಿದೆ.
ಸಾಮಾನ್ಯವಾಗಿ, ಹಾಸಿಗೆಗೆ ಹೋಗಿ 5-20 ನಿಮಿಷದೊಳಗೆ ನಿದ್ರೆ ಬರುತ್ತದೆ. ಆದ್ರೆ ಕೆಲವರಿಗೆ ಹಾಸಿಗೆಗೆ ಹೋಗ್ತಿದ್ದಂತೆ ನಿದ್ರೆ ಬರುತ್ತದೆ. ಈ ತಕ್ಷಣದ ನಿದ್ರೆಗೆ ನಿದ್ರಾಹೀನತೆಯೇ ಕಾರಣ. ಅಂದ್ರೆ ರಾತ್ರಿ 6 ಗಂಟೆಗಳ ಕಾಲ ನಿದ್ರೆ ಮಾಡಿರುವುದಿಲ್ಲ. ದೇಹಕ್ಕೆ ನಿದ್ರೆಯ ಅವಶ್ಯಕತೆಯಿರುತ್ತದೆ. ನಿದ್ರಾಹೀನತೆ ಕಾಡುತ್ತಿರುತ್ತದೆ. ಅಂತವರು ಹಾಸಿಗೆಗೆ ಹೋದ ತಕ್ಷಣ ನಿದ್ರೆ ಮಾಡ್ತಾರೆ.
ಮಲಗಿ ಮೂರು ನಿಮಿಷದಲ್ಲಿ ನಿದ್ರೆ ಬಂದಿದ್ದು, ನಿದ್ರೆಯಿಂದ ಎದ್ದ ತಕ್ಷಣ ನೀವು ಫ್ರೆಶ್ ಆಗಿದ್ರೆ ಇದ್ರಿಂದ ಯಾವುದೇ ಸಮಸ್ಯೆಯಿಲ್ಲ. ಕೆಲವರು ರಾತ್ರಿ ಸರಿಯಾಗಿ ನಿದ್ರೆ ಮಾಡಿರುವುದಿಲ್ಲ. ಬೆಳಿಗ್ಗೆ ಬೇಗ ಏಳುತ್ತಾರೆ. ಅಂತವರಿಗೆ ಬೇಗ ನಿದ್ರೆ ಬರುತ್ತದೆ. ಬಹುಬೇಗ ನಿದ್ರೆ ಬರುವುದನ್ನು ಸ್ಲೀಪ್ ಡಿಸಾರ್ಡರ್ ಎಂದೂ ಕರೆಯುತ್ತಾರೆ. ಸರಿಯಾಗಿ ನಿದ್ರೆ ಬರದಿದ್ದರೆ ಮಧುಮೇಹ, ಹೃದಯ ಖಾಯಿಲೆ, ಕೊಬ್ಬು, ಅಧಿಕ ರಕ್ತದೊತ್ತಡ, ಖಿನ್ನತೆ ಕಾಡುವ ಸಾಧ್ಯತೆಯಿರುತ್ತದೆ.