
ದಿನವಿಡೀ ಕಾಣಿಸಿಕೊಳ್ಳದ ಸೊಳ್ಳೆಗಳು ಸಂಜೆ ಆರು ಗಂಟೆ ಆಗುತ್ತಿದ್ದಂತೆ ಗುಂಯ್ ಗುಡಲು ಆರಂಭಿಸುತ್ತವೆ. ಎಂಟು ಗಂಟೆ ತನಕ ಅದರ ಕಾಟ ಹೇಳತೀರದು. ಯಾವ ಸೊಳ್ಳೆ ಬತ್ತಿಗೂ ಅಂಜದ ಅವು ಅದ್ಯಾವುದೋ ಮಾಯಕದ ಘಳಿಗೆಯಲ್ಲಿ ನಿಮ್ಮ ಕೈಗೆ ಇಂಜೆಕ್ಷನ್ ಕೊಟ್ಟು ಹೋಗಿರುತ್ತವೆ.
ಈ ಕಡಿತದ ನೋವು ಕೆಲವರಿಗೆ ಕೆಲವು ರೂಪದಲ್ಲಿರುತ್ತದೆ. ಸೂಕ್ಷ್ಮ ದೇಹಿಗಳಿಗೆ ಇದು ಅಲರ್ಜಿ ರೂಪದಲ್ಲಿ ಕಾಣಿಸಿಕೊಂಡು ತೀವ್ರ ತೊಂದರೆ ಕೊಡುವುದೂ ಉಂಟು. ಹಾಗಾಗಿ ಸೊಳ್ಳೆ ಕಚ್ಚಿದ ಜಾಗಕ್ಕೆ ಕೂಡಲೆ ಐಸ್ ಪ್ಯಾಕ್ ನಿಂದ ಮಸಾಜ್ ಮಾಡುವುದರಿಂದ ಅದು ಅಲರ್ಜಿ ರೂಪಕ್ಕೆ ಬದಲಾಗುವುದನ್ನು ತಡೆಯಬಹುದು.
ಹಾಲಿಗೆ ತುಸು ಅಡುಗೆ ಸೋಡಾ ಬೆರೆಸಿ ಸೊಳ್ಳೆ ಕಚ್ಚಿದ ಜಾಗಕ್ಕೆ ಹಚ್ಚಿಕೊಂಡರೆ ನೋವು ಹಾಗೂ ಕೆಂಪಾಗಿ ಊದಿಕೊಂಡ ಜಾಗ ಸರಿಯಾಗುತ್ತದೆ.
ಬೇಯಿಸಿದ ಓಟ್ಸ್ ಅನ್ನು ಸೊಳ್ಳೆ ಕಚ್ಚಿದ ಜಾಗಕ್ಕೆ ಹಚ್ಚಿಕೊಂಡರೆ ತುರಿಕೆ ಸಮಸ್ಯೆ ಕಡಿಮೆಯಾಗುತ್ತದೆ. ಸಂಜೆ ವೇಳೆ ತುಂಬು ತೋಳಿನ ಉಡುಪನ್ನು ಧರಿಸುವ ಮೂಲಕ, ಕಿಟಕಿ ಬಾಗಿಲನ್ನು ಮುಚ್ಚುವ ಮೂಲಕ ಸೊಳ್ಳೆ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳಿ.