ಅನಾರೋಗ್ಯಕರ ಆಹಾರ ಪದ್ಧತಿಯಿಂದಾಗಿ ಈಗ ಎಲ್ಲರಿಗೂ ಉದರ ಬಾಧೆ ಸಾಮಾನ್ಯವಾಗಿಬಿಟ್ಟಿದೆ. ಮಧ್ಯಾಹ್ನ ಊಟವಾದ ಮೇಲೆ ಹೊಟ್ಟೆ ಉಬ್ಬರಿಸೋದು, ಗ್ಯಾಸ್ಟ್ರಿಕ್, ಅಜೀರ್ಣ ಇವೆಲ್ಲವೂ ಸಮಸ್ಯೆಯಾಗಿ ಕಾಡುತ್ತದೆ. ಈ ರೀತಿ ಹೊಟ್ಟೆ ಉಬ್ಬರಿಸಿದಾಗ ಹೊಟ್ಟೆ ನೋವು ಕೂಡ ಬರುತ್ತದೆ.
ಅಂತಹ ಪರಿಸ್ಥಿತಿಯಲ್ಲಿ ಸ್ವಲ್ಪ ಕಾಳಜಿ ವಹಿಸಿದರೆ ಸಮಸ್ಯೆಯನ್ನು ತ್ವರಿತವಾಗಿ ನಿವಾರಿಸಬಹುದು. ಇಲ್ಲಿ ಪಟ್ಟಿ ಮಾಡಿರುವ ನಾಲ್ಕು ಆಹಾರಗಳನ್ನು ತಿನ್ನದೇ ಇದ್ದರೆ ಬ್ಲೋಟಿಂಗ್ ನಿಯಂತ್ರಣಕ್ಕೆ ಬರುತ್ತದೆ.
ಬ್ರೊಕೊಲಿ : ನಿಮಗೆ ಹೊಟ್ಟೆ ಉಬ್ಬರಿಸುವ ಸಮಸ್ಯೆ ಇದ್ದರೆ ಬ್ರೊಕೊಲಿಯನ್ನು ಸೇವಿಸಬೇಡಿ. ಬ್ರೊಕೊಲಿ ಸುಲಭವಾಗಿ ಜೀರ್ಣವಾಗುವುದಿಲ್ಲ. ಇದರಿಂದಾಗಿ ಹೊಟ್ಟೆ ಉಬ್ಬರಿಸುವ ಸಮಸ್ಯೆ ಮತ್ತಷ್ಟು ಹೆಚ್ಚಾಗಬಹುದು.
ಸೇಬು : ಗ್ಯಾಸ್ಟ್ರಿಕ್ ನಿಂದ ಹೊಟ್ಟೆ ಉಬ್ಬರಿಸ್ತಾ ಇದ್ರೆ ಸೇಬು ಹಣ್ಣು ತಿನ್ನಬೇಡಿ. ಸೇಬು ಹಣ್ಣಿನಲ್ಲಿ ಫೈಬರ್ ಅಂಶ ಹೇರಳವಾಗಿದೆ. ಇದು ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಜಾಸ್ತಿ ಮಾಡುತ್ತದೆ. ಹಾಗಾಗಿ ಹೊಟ್ಟೆ ನೋವು ಕೂಡ ಹೆಚ್ಚಾಗಬಹದು.
ಬೆಳ್ಳುಳ್ಳಿ : ಬೆಳ್ಳುಳ್ಳಿ ಉಬ್ಬುವಿಕೆಯ ಸಮಸ್ಯೆಯನ್ನು ಹೆಚ್ಚಿಸುತ್ತದೆ. ಬ್ಲೋಟಿಂಗ್ ನಲ್ಲಿ ಫ್ರುಕ್ಟಾನ್‌ಗಳು ಕಂಡುಬರುತ್ತವೆ. ಹಾಗಾಗಿ ಬೆಳ್ಳುಳ್ಳಿ ತಿನ್ನುವುದರಿಂದ ಬ್ಲೋಟಿಂಗ್ ಹೆಚ್ಚಾಗುತ್ತದೆ.
ಬೀನ್ಸ್ : ಬೀನ್ಸ್ ನಲ್ಲಿ ಫೈಬರ್ ಅಂಶ ಹೆಚ್ಚಾಗಿದೆ. ಹಾಗಾಗಿ ಇದನ್ನು ತಿಂದರೆ ಹೊಟ್ಟೆ ಉಬ್ಬರ ಸಮಸ್ಯೆ ಹೆಚ್ಚಾಗಬಹುದು. ಹಾಗಾಗಿ ಬ್ಲೋಟಿಂಗ್ ಇದ್ದರೆ ಬೀನ್ಸ್ ತಿನ್ನಬೇಡಿ. ಬೀನ್ಸ್ ಸಾಂಬಾರ್, ಪಲ್ಯ ಇವನ್ನೆಲ್ಲ ಅವಾಯ್ಡ್ ಮಾಡುವುದು ಉತ್ತಮ. ಯಾಕಂದ್ರೆ ಇದು ಅತಿಸಾರಕ್ಕೂ ಕಾರಣವಾಗಬಹುದು.