ಟೀ ಹೆಸ್ರು ಕೇಳ್ತಿದ್ದಂತೆ ಕೆಲವರ ಮುಖದಲ್ಲಿದ್ದ ಆಯಾಸ ಮಾಯವಾಗುತ್ತದೆ. ಒತ್ತಡ, ಆಯಾಸವಾದಾಗ ನೆನಪಾಗೋದು ಟೀ. ಬಹುತೇಕರು ದಿನಕ್ಕೆ ನಾಲ್ಕೈದು ಬಾರಿ ಟೀ ಸೇವನೆ ಮಾಡ್ತಾರೆ. ಬೆಳಿಗ್ಗೆ ಹಾಸಿಗೆಯಿಂದ ಏಳುತ್ತಲೇ ಟೀ ಕುಡಿದು ಫ್ರೆಶ್ ಆಗುವವರಿದ್ದಾರೆ. ಆಹಾರದ ನಂತ್ರವಂತೂ ಅನೇಕರಿಗೆ ಟೀ ಬೇಕೇಬೇಕು. ಅಂತವರಲ್ಲಿ ನೀವೂ ಒಬ್ಬರಾಗಿದ್ದರೆ ಈ ಸುದ್ದಿಯನ್ನು ಅವಶ್ಯಕವಾಗಿ ಓದಿ.
ಆಹಾರ ಸೇವನೆ ಮಾಡಿದ ತಕ್ಷಣ ಟೀ ಕುಡಿಯೋದು ಅನೇಕರ ಅಭ್ಯಾಸ. ಚಳಿಗಾಲದಲ್ಲಂತೂ ಟೀ ಬೇಕೇಬೇಕು ಎನ್ನುವವರಿದ್ದಾರೆ. ಆದ್ರೆ ಆಹಾರ ಸೇವನೆ ಮಾಡಿದ ತಕ್ಷಣ ಟೀ ಕುಡಿಯೋದು ಆರೋಗ್ಯಕ್ಕೆ ಒಳ್ಳೆಯದಲ್ಲ. ಟೀ ಎಲೆಗಳಲ್ಲಿ ಎಸಿಡಿಟಿ ಗುಣವಿರುತ್ತದೆ. ಆಹಾರ ನಂತ್ರ ಟೀ ಸೇವನೆ ಮಾಡುವುದ್ರಿಂದ ಪ್ರೋಟೀನ್ ಅಂಶ ನಾಶವಾಗಿ ಜೀರ್ಣಕ್ರಿಯೆಗೆ ತೊಂದರೆಯಾಗುತ್ತದೆ.
ಇದ್ರ ಜೊತೆಗೆ ಟೀನಲ್ಲಿರುವ ಕೆಫೀನ್ ಅಂಶ ರಕ್ತದೊತ್ತಡವನ್ನು ಹೆಚ್ಚು ಮಾಡುತ್ತದೆ. ಜೊತೆಗೆ ಕಾರ್ಟಿಸೋಲ್ ಅನ್ನು ಹೆಚ್ಚು ಮಾಡುತ್ತದೆ. ಇದು ದೇಹದ ಅನೇಕ ಸಮಸ್ಯೆಗೆ ಕಾರಣವಾಗುತ್ತದೆ. ಹೃದಯ ಸಂಬಂಧಿ ಸಮಸ್ಯೆ, ಮಧುಮೇಹ, ತೂಕ ಹೆಚ್ಚಾಗುವ ಸಮಸ್ಯೆ ಕಾಡುತ್ತದೆ.
ಟೀಯಲ್ಲಿರುವ ಪಾಲಿಫಿನಾಲ್ ಮತ್ತು ಟ್ಯಾನಿನ್ ಆಹಾರದಲ್ಲಿರುವ ಕೊಬ್ಬನ್ನು ಹೀರಿಗೊಳ್ಳಲು ಬಿಡುವುದಿಲ್ಲ. ವಿಶೇಷವಾಗಿ ಕಬ್ಬಿಣದ ಅಂಶ ಕಡಿಮೆ ಇರುವ ಮಹಿಳೆಯರು ಆಹಾರದ ತಕ್ಷಣ ಟೀ ಕುಡಿಯಬಾರದು. ಟೀ ಕುಡಿಯದೆ ಇರಲು ಸಾಧ್ಯವೇ ಇಲ್ಲ ಎನ್ನುವವರು ಆಹಾರ ಸೇವನೆ ಮಾಡಿದ ಒಂದು ಗಂಟೆ ನಂತ್ರ ಟೀ ಕುಡಿಯಿರಿ.