ಅರೆನಿದ್ದೆಯಲ್ಲಿ ನಿಮಗೆ ಚಹಾ, ಕಾಫಿ ಕುಡಿಯುವ ಅಭ್ಯಾಸವಿದೆಯೇ… ಸರಿ ಕಣ್ಣು ತೆರೆಯುವ ಮುನ್ನವೇ ಅಮ್ಮಾ ಟೀ, ಕಾಫಿ ಎಂದು ಕೂಗುವವರಲ್ಲಿ ನೀವೂ ಒಬ್ಬರೆ, ಹಾಗಿದ್ದರೆ ಇಂದೇ ನಿಮ್ಮ ಈ ಹವ್ಯಾಸ ಕೈಬಿಡಿ.
ಬೆಳಗ್ಗೆ ಎದ್ದಾಕ್ಷಣ ಹಲ್ಲುಜ್ಜದೆ ಟೀ, ಕಾಫಿ ಸೇವನೆ ಮಾಡುವುದರಿಂದ ಬಾಯಿಯಲ್ಲಿರುವ ಬ್ಯಾಕ್ಟೀರಿಯಾಗಳು ನಿಮ್ಮ ಹೊಟ್ಟೆಯನ್ನು ಸೇರುತ್ತವೆ. ಇದರಿಂದ ಅಜೀರ್ಣದಂಥ ಸಮಸ್ಯೆ ಕಾಡಬಹುದು.
ಇನ್ನು ದೇಹ ಸರಿಯಾದ ಕಬ್ಬಿಣಾಂಶವನ್ನೂ ಹೀರಿಕೊಳ್ಳುವುದಿಲ್ಲ. ಇದರಿಂದ ನಿಮಗೆ ರಕ್ತಹೀನತೆಯಂಥ ಸಮಸ್ಯೆಗಳೂ ಕಾಡಬಹುದು. ಮೊಡವೆಗಳೂ ಹೆಚ್ಚಿ ಮುಖದ ತ್ವಚೆ ಅಂದಗೆಡಬಹುದು.
ಬೆಡ್ ಟೀ ಸೇವನೆ ಮಾಡಿದರೆ ಹಲ್ಲಿನ ಎನಾಮಲ್ ಗಳು ಹಾಳಾಗುತ್ತವೆ. ಜೀರ್ಣಕ್ರಿಯೆಯ ತೊಂದರೆಗಳು ಕಾಣಿಸಿಕೊಂಡಾವು. ಅಸಿಡಿಟಿ ಹೆಚ್ಚಿ ಅಲ್ಸರ್ ನಂಥ ಸಮಸ್ಯೆಗಳಿಗೂ ಕಾರಣವಾದೀತು. ಹೀಗಾಗಿ ಬೆಳಗೆದ್ದು ಬ್ರಶ್ ಮಾಡಿದ ಬಳಿಕ ಎರಡು ಲೋಟ ಬೆಚ್ಚಗಿನ ನೀರು ಕುಡಿದ ಬಳಿಕವೇ ಚಹಾ, ಕಾಫಿ ಕುಡಿಯಿರಿ.