ಕೂದಲಿಗೆ ಬಣ್ಣ ಹಚ್ಚಿಕೊಳ್ಳುವುದು ಈಗ ಸಾಮಾನ್ಯ ಸಂಗತಿ. ಕೂದಲಿನ ಬಣ್ಣ ನಮ್ಮ ಸೌಂದರ್ಯವನ್ನು ವೃದ್ಧಿಸುತ್ತದೆ. ಕೂದಲಿಗೆ ಬಣ್ಣ ಹಚ್ಚಿಕೊಳ್ಳುವುದು ಸುಲಭ. ಆದ್ರೆ ಯಾವ ಬಣ್ಣ ನಮ್ಮ ಕೂದಲಿಗೆ ಸೂಕ್ತ ಎಂಬುದನ್ನು ಆಯ್ಕೆ ಮಾಡಿಕೊಳ್ಳುವುದು ಕಷ್ಟ. ಮುಖಕ್ಕೆ ಹೊಂದದ ಬಣ್ಣವನ್ನು ಕೂದಲಿಗೆ ಬಳಿದುಕೊಂಡ್ರೆ ಮುಖದ ಸೌಂದರ್ಯ ಹಾಳಾಗುತ್ತದೆ. ಹಾಗಾಗಿ ಮುಖಕ್ಕೆ ಹೊಂದುವ ಬಣ್ಣವನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.
ನಿಮ್ಮ ಚರ್ಮ ಹಳದಿ ಬಣ್ಣದಲ್ಲಿದ್ದರೆ ಕೂದಲಿಗೆ ಡಾರ್ಕ್ ಬಣ್ಣವನ್ನು ಬಳಸುವುದು ಉತ್ತಮ. ತಿಳಿ ಬಣ್ಣದ ಹೇರ್ ಕಲರ್ ಬಳಸದಿರುವುದು ಸೂಕ್ತ. ಡಾರ್ಕ್ ಬಣ್ಣ ನಿಮ್ಮ ಕೂದಲು ಹಾಗೂ ಮುಖದ ಸೌಂದರ್ಯವನ್ನು ಹೆಚ್ಚಿಸುತ್ತದೆ.
ಗುಲಾಬಿ ಬಣ್ಣದ ಚರ್ಮ ನಿಮ್ಮದಾಗಿದ್ದರೆ ಕೆಂಪು, ಬಂಗಾರದ ಬಣ್ಣವನ್ನು ಹಚ್ಚಬೇಡಿ. ಬೂದು ಬಣ್ಣವನ್ನು ಕೂದಲಿಗೆ ಹಚ್ಚಿ.
ನಿಮ್ಮ ಚರ್ಮ ಗಾಢ ಹಳದಿಯಾಗಿದ್ದರೆ ಕಪ್ಪು ಅಥವಾ ಗಾಢ ಕಪ್ಪು ಬಣ್ಣವನ್ನು ಹಚ್ಚಬೇಡಿ. ಇದು ನಿಮ್ಮ ಚರ್ಮದ ಹಳದಿತನವನ್ನು ಹೆಚ್ಚಿಸುತ್ತದೆ.
ಕಣ್ಣಿನ ಬಣ್ಣ ಕಂದು, ಹಸಿರಿದ್ದವರು ಕೂದಲಿಗೆ ಕಪ್ಪು ಅಥವಾ ಗೋಲ್ಡನ್ ಬಣ್ಣವನ್ನು ಬಳಸಬೇಕು. ಹಳದಿ ಕಣ್ಣಿರುವವರಿಗೂ ಈ ಹೇರ್ ಕಲರ್ ಬೆಸ್ಟ್.
ನೀಲಿ ಹಾಗೂ ಬೂದು ಬಣ್ಣದ ಕಣ್ಣಿರುವವರ ಕೂದಲಿಗೆ ಗೋಲ್ಡ್ ಅಥವಾ ಬೂದು ಬಣ್ಣ ಹೊಂದುತ್ತದೆ.