ಅನೇಕರು ನಿದ್ರೆ ಮಾಡುವಾಗ ಮೂಗಿನ ಬದಲು ಬಾಯಿಯ ಮೂಲಕ ಉಸಿರಾಡುತ್ತಾರೆ. ಇದು ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತದೆ. ಮೂಗು ಮತ್ತು ಬಾಯಿಯ ಉಸಿರಾಟದ ಹಿಂದಿನ ವಿಜ್ಞಾನವನ್ನು ಅರ್ಥ ಮಾಡಿಕೊಳ್ಳಬೇಕು.
ತಜ್ಞರ ಪ್ರಕಾರ, ಮೂಗಿನ ಮೂಲಕ ಉಸಿರಾಡುವುದರಿಂದ ಅನೇಕ ಲಾಭವಿದೆ. ತೂಕ ಇಳಿಸಲು ಸಹಾಯ ಮಾಡುತ್ತದೆ. ಆಮ್ಲಜನಕವನ್ನು ತೆಗೆದುಕೊಂಡು ಕಾರ್ಬನ್ ಡೈಆಕ್ಸೈಡ್ ಬಿಡುಗಡೆ ಮಾಡುತ್ತೀರಿ. ಮೂಗಿನ ಮೂಲಕ ಉಸಿರಾಡುವುದು ಸಾಮಾನ್ಯ. ಆದ್ರೆ ಮೂಗು ಕಟ್ಟಿಕೊಂಡಾಗ ಬಾಯಿಯ ಮೂಲಕ ಉಸಿರಾಡಲು ಪ್ರಾರಂಭಿಸುತ್ತೇವೆ. ಹೆಚ್ಚಿನ ಜನರು ಮಲಗಿದಾಗ ಬಾಯಿಯ ಮೂಲಕ ಉಸಿರಾಡಲು ಪ್ರಾರಂಭಿಸುತ್ತಾರೆ. ಇದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
ನಿದ್ದೆ ಮಾಡುವುದ್ರಿಂದ ದೇಹ ವಿಶ್ರಾಂತಿ ಪಡೆಯುತ್ತದೆ. ನಿದ್ರೆ ದೇಹಕ್ಕೆ ಶಕ್ತಿ ನೀಡುತ್ತದೆ. ನರಮಂಡಲಗಳು ವಿಶ್ರಾಂತಿ ಪಡೆಯುವಂತೆ ಉಸಿರಾಡುವುದು ಮುಖ್ಯವಾಗುತ್ತದೆ. ನಿದ್ರೆ ಮಾಡುವಾಗ, ಮೂಗಿನ ಮೂಲಕ ಉಸಿರಾಡಬೇಕು. ಮೂಗು ಕಟ್ಟಿಕೊಳ್ಳುವ ಸಮಸ್ಯೆಯಿರುವವರು, ವಿಟಮಿನ್ ಸಿ ಪೂರಕ ಮತ್ತು ವಿಟಮಿನ್ ಸಿ ಸಮೃದ್ಧವಾಗಿರುವ ಆಹಾರವನ್ನು ಸೇವಿಸಬೇಕು. ಸತು ಸಮೃದ್ಧವಾಗಿರುವ ಆಹಾರಗಳು ಕೂಡ, ಉಸಿರಾಟವನ್ನು ಸುಧಾರಿಸುವಲ್ಲಿ ಸಹಕಾರಿ. ಎಷ್ಟು ಪ್ರಮಾಣದಲ್ಲಿ ಅದ್ರ ಸೇವನೆ ಮಾಡಬೇಕೆಂಬುದರ ಬಗ್ಗೆ ವೈದ್ಯರ ಸಲಹೆ ಪಡೆಯಬೇಕು.