ತುರುಬು ಕಟ್ಟುವುದು ಈಗ ಫ್ಯಾಷನ್. ವಿಶೇಷ ಸಂದರ್ಭಗಳಲ್ಲಿ ಹುಡುಗಿಯರು ಬೇರೆ ಬೇರೆ ಸ್ಟೈಲ್ ನ ತುರುಬು ಕಟ್ಟಿಕೊಳ್ತಾರೆ. ಬಹುತೇಕ ಕೂದಲು ಉದ್ದವಿರುವವರು ಈ ಹೇರ್ ಸ್ಟೈಲ್ ಮಾಡೋದು ಹೆಚ್ಚು. ಕೂದಲು ಬೇಗ ಧೂಳಾಗುವುದಿಲ್ಲ ಹಾಗೆ ಕೂದಲು ಹಾಳಾಗುವುದಿಲ್ಲ ಎನ್ನುವ ಕಾರಣಕ್ಕೆ ತುರುಬು ಕಟ್ತಾರೆ.
ಕೆಲ ಮಹಿಳೆಯರಿಗೆ ಬೇರೆ ಹೇರ್ ಸ್ಟೈಲ್ ಮಾಡಿಕೊಳ್ಳಲು ಸಮಯವಿರೋದಿಲ್ಲ. ಈ ಕಾರಣಕ್ಕೂ ತುರುಬು ಕಟ್ಟುವವರಿದ್ದಾರೆ. ನೀವು ಸದಾ ತುರುಬು ಕಟ್ಟಿಕೊಳ್ಳುವರಾಗಿದ್ದರೆ ಇದನ್ನು ಅವಶ್ಯವಾಗಿ ಓದಿ. ಹೆಚ್ಚು ತುರುಬು ಕಟ್ಟಿಕೊಳ್ಳುವವರಿಗೆ ಕೂದಲು ಸಮಸ್ಯೆ ಜಾಸ್ತಿಯಂತೆ. ಹೆಚ್ಚಿನ ಪ್ರಮಾಣದಲ್ಲಿ ಕೂದಲು ಉದುರುತ್ತದೆಯಂತೆ.
ತುರುಬು ಕಟ್ಟುವುದರಿಂದ ಕೂದಲು ಯಾವಾಗ್ಲೂ ಕಟ್ಟಲ್ಪಟ್ಟಿರುತ್ತದೆ. ಇದ್ರಿಂದ ಕೂದಲು ಬೇಗ ಆಯ್ಲಿಯಾಗುತ್ತೆ. ಇದ್ರಿಂದ ಮರುದಿನ ತಲೆ ಸ್ನಾನ ಮಾಡುವ ಅನಿವಾರ್ಯತೆ ಎದುರಾಗುತ್ತದೆ. ಜೊತೆಗೆ ತಲೆ ಹೊಟ್ಟು, ತುರಿಕೆ, ಕೂದಲು ಉದುರುವ ಸಮಸ್ಯೆ ಕಾಡುತ್ತದೆ.
ಕೂದಲು ದುರ್ಬಲವಾಗಲು ತುರುಬು ಕಟ್ಟುವುದು ಒಂದು ಮುಖ್ಯ ಕಾರಣ. ಕೂದಲನ್ನು ಹಿಂದಕ್ಕೆ ಎಳೆದು ಕಟ್ಟುವುದರಿಂದ ರಕ್ತ ಸಂಚಾರ ಕಡಿಮೆಯಾಗುತ್ತದೆ. ಇದ್ರಿಂದ ಕೂದಲು ದುರ್ಬಲವಾಗಿ ಉದುರುತ್ತದೆ.
ಸದಾ ತುರುಬು ಕಟ್ಟುವುದರಿಂದ ಕೂದಲಿನ ಬೆವರು ಗಾಳಿಗೆ ಒಣಗುವುದಿಲ್ಲ. ಕೂದಲಿಗೆ ಬಿಡಿ ಬಿಡಿಯಾಗಿರಲು ಜಾಗ ಸಿಗುವುದಿಲ್ಲ. ಇದ್ರಿಂದ ಕೂದಲು ವಾಸನೆ ಬರಲು ಶುರುವಾಗುತ್ತದೆ. ಜೊತೆಗೆ ಜಿಗುಟಾಗುತ್ತದೆ. ಕೂದಲು ಹೊಳಪು ಕಳೆದುಕೊಳ್ಳುತ್ತದೆ.