![](https://kannadadunia.com/wp-content/uploads/2023/12/gruhalakshmi.jpg)
ಬೆಂಗಳೂರು : ನಿಮಗೆ ಇನ್ನೂ ಗೃಹಲಕ್ಷಿ ಯೋಜನೆ ಹಣ ಬರುತ್ತಿಲ್ಲವೇ, ನಿಮ್ಮ ಆಧಾರ್ ಜೋಡಣೆ, ಬ್ಯಾಂಕ್ ಖಾತೆಗಳ ಸಮಸ್ಯೆಗಳಿಗೆ ಒಂದೇ ವೇದಿಕೆಯಲ್ಲಿ ಪರಿಹಾರ ದಿನಾಂಕ:27.12.2023 ರಿಂದ 29.12.2023 ರಂದು ಗ್ರಾಮ ಪಂಚಾಯತಿಗಳಿಗೆ ಭೇಟಿ ನೀಡಬಹುದು.
ಗೃಹಲಕ್ಷ್ಮಿ ಯೋಜನೆ ಅರ್ಜಿದಾರರಿಗೆ ಸಂಬಂಧಿಸಿದ ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಲು ಬುಧವಾರದಿಂದ ಶುಕ್ರವಾರದವರೆಗೆ ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ವಿಶೇಷ ಶಿಬಿರ ಆಯೋಜಿಸಲಾಗಿದೆ.
ಪಂಚಾಯತ್ ರಾಜ್ ಅಧಿಕಾರಿಗಳ ನೇತೃತ್ವದಲ್ಲಿ ಶಿಬಿರ ನಡೆಯಲಿದ್ದು, ಬಾಪೂಜಿ ಸೇವಾ ಕೇಂದ್ರದ ಕಂಪ್ಯೂಟರ್ ನಿರ್ವಾಹಕರು, ಅಂಗನವಾಡಿ ಕಾರ್ಯಕರ್ತರು, ಎಲೆಕ್ಟ್ರಾನಿಕ್ ಡೆಲಿವರಿ ಆಫ್ ಸಿಟಿಜನ್ ಸರ್ವಿಸಸ್ (ಇ.ಡಿ.ಸಿ) ತಂಡಗಳ ಸಿಬ್ಬಂದಿ, ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಹಾಗೂ ಇತರ ಬ್ಯಾಂಕ್‌ಗಳ ಪ್ರತಿನಿಧಿಗಳು ಈ ಶಿಬಿರದಲ್ಲಿ ಭಾಗವಹಿಸುತ್ತಾರೆ.
ಈ ಸಮಸ್ಯೆಗಳಿಗೆ ಪರಿಹಾರ
ಆಧಾರ್ ಜೋಡಣೆ
ಬ್ಯಾಂಕ್ ಸಮಸ್ಯೆ
ಇ-ಕೆವೈಸಿ
ಹೊಸ ಬ್ಯಾಂಕ್ ಖಾತೆ ಆರಂಭ
ಜೊತೆಗೆ ತರಬೇಕಾದ ದಾಖಲೆಗಳು
ತಮ್ಮ ಆಧಾರ್ ಕಾರ್ಡ್
ಪತಿಯ ಆಧಾರ್ ಕಾರ್ಡ್
ಪಡಿತರ ಚೀಟಿ
ಬ್ಯಾಂಕ್ ಪಾಸ್ ಪುಸ್ತಕ