ಅನೇಕ ಮಹಿಳೆಯರು ಬೆಳಿಗ್ಗೆ ತಲೆ ಸ್ನಾನ ಮಾಡಲು ಇಷ್ಟಪಡುವುದಿಲ್ಲ. ರಾತ್ರಿ ಕೂದಲು ತೊಳೆದ ಮಲಗುತ್ತಾರೆ. ಆದರೆ ರಾತ್ರಿಯಲ್ಲಿ ನಿಮ್ಮ ತಲೆ ಕೂದಲು ತೊಳೆಯುವುದು ಕೂದಲಿಗೆ ಸಾಕಷ್ಟು ಹಾನಿಯನ್ನುಂಟು ಮಾಡುತ್ತದೆ.
ರಾತ್ರಿ ತಲೆ ಸ್ನಾನ ಮಾಡುವುದ್ರಿಂದ ಕೂದಲು ದುರ್ಬಲಗೊಳ್ಳುತ್ತದೆ. ಒದ್ದೆಯಾದ ಕೂದಲಿನಲ್ಲಿ ಮಲಗುವುದು ಕೂದಲು ಉದುರಲು ಕಾರಣವಾಗುತ್ತದೆ.
ರಾತ್ರಿ ತಲೆ ಸ್ನಾನ ಮಾಡಿ ಒದ್ದೆ ಕೂದಲಿನಲ್ಲಿ ಮಲಗಿದ್ರೆ ಕೂದಲಿನ ಶೇಪ್ ಬದಲಾಗುತ್ತದೆ. ಬೆಳಿಗ್ಗೆ ಎದ್ದಾಗ ಕೂದಲಿಗೆ ಶೇಪ್ ನೀಡುವುದು ಕಷ್ಟವಾಗುತ್ತದೆ. ಸಿಕ್ಕುಗಳು ಜಾಸ್ತಿಯಾಗಿ ಕೂದಲು ಉದುರುತ್ತದೆ.
ಕೆಲವರು ತಲೆ ಸ್ನಾನ ಮಾಡಿದ ನಂತ್ರ ಒದ್ದೆ ಕೂದಲನ್ನು ಬಾಚುತ್ತಾರೆ. ಇದು ಕೂದಲಿನ ಬುಡಕ್ಕೆ ಹಾನಿಯುಂಟು ಮಾಡುತ್ತದೆ. ಕೂದಲು ಉದುರಲು ಕಾರಣವಾಗುತ್ತದೆ.
ಒದ್ದೆಯಾದ ಕೂದಲಿನಲ್ಲಿ ಮಲಗುವುದು ಶಿಲೀಂಧ್ರ, ತಲೆಹೊಟ್ಟು, ಕೂದಲು ಉದುರುವುದು ಮತ್ತು ಸೋಂಕಿನಂತಹ ಸಮಸ್ಯೆಗಳನ್ನು ಉಂಟುಮಾಡುತ್ತದೆ.
ರಾತ್ರಿಯಲ್ಲಿ ಕೂದಲು ತೊಳೆಯುವುದ್ರಿಂದ ಶೀತ ಹೆಚ್ಚುತ್ತದೆ. ಇದು ತಲೆನೋವಿಗೆ ಕಾರಣವಾಗಬಹುದು. ಒದ್ದೆಯಾದ ಕೂದಲಿಗೆ ಧೂಳು ದೀರ್ಘಕಾಲ ಸೇರುವುದರಿಂದ ಅಲರ್ಜಿಯ ಅಪಾಯವೂ ಹೆಚ್ಚುತ್ತದೆ. ರಾತ್ರಿ ತಲೆ ಸ್ನಾನ ಅನಿವಾರ್ಯವಾದ್ರೆ ಸರಿಯಾಗಿ ಒಣಗಿದ ಮೇಲೆ ಮಲಗಿ.