ಗೊರಕೆ ಅನೇಕರ ದೊಡ್ಡ ಸಮಸ್ಯೆ. ಬೇರೆಯವರ ಗೊರಕೆ, ಉಳಿದವರಿಗೆ ನಿದ್ರೆ ನೀಡುವುದಿಲ್ಲ. ನಿದ್ದೆ ಮಾಡುವಾಗ ಮೂಗು ಮತ್ತು ಬಾಯಿಯ ಹಿಂಭಾಗವನ್ನು ಮುಚ್ಚುತ್ತಾರೆ. ನಿದ್ದೆ ಮಾಡುವಾಗ ಮೂಗು ಮತ್ತು ಬಾಯಿಯ ಹಿಂಭಾಗ ಮುಚ್ಚಲ್ಪಡುತ್ತದೆ. ಇದು ಈ ಸಮಸ್ಯೆಗೆ ಕಾರಣವಾಗುತ್ತದೆ.
ಗೊರಕೆ ಸಮಸ್ಯೆಯಿರುವವರು ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆಯಬಹುದು. ಮನೆ ಮದ್ದಿನ ಮೂಲಕವೂ ಗೊರಕೆಗೆ ಔಷಧಿ ಪಡೆಯಬಹುದು. ಗೊರಕೆ ಗಂಭೀರ ಆರೋಗ್ಯ ಸಮಸ್ಯೆ. ಗೊರಕೆಯಿಂದ ಸ್ಟ್ರೋಕ್ ಆಗಿ ಮೆದುಳಿಗೆ ರಕ್ತ ಪೂರೈಕೆ ನಿಲ್ಲುವ ಸಾಧ್ಯತೆಯಿದೆ.
ಈಗಾಗಲೇ ಗೊರಕೆಗೆ ಸಂಬಂಧಿಸಿದಂತೆ ಅನೇಕ ಅಧ್ಯಯನ ನಡೆದಿವೆ. ಅಧ್ಯಯನವೊಂದರಲ್ಲಿ ಉಸಿರಾಟದಲ್ಲಿ ಉಂಟಾಗುವ ಅಡಚಣೆಯಿಂದ ದೇಹದ ಭಾಗಗಳಿಗೆ ರಕ್ತ ಮತ್ತು ಆಮ್ಲಜನಕದ ಕೊರತೆಯುಂಟಾಗುತ್ತದೆ, ಇದು ಮೆದುಳು ಮತ್ತು ಹೃದಯವನ್ನು ಬಲಪಡಿಸುತ್ತದೆ. ಆದ್ರೆ ವ್ಯಕ್ತಿಯ ಹೃದಯಾಘಾತದ ಸಾಧ್ಯತೆಗಳನ್ನು ಕಡಿಮೆ ಮಾಡುವುದಿಲ್ಲ ಎಂದು ಅಧ್ಯಯನದಲ್ಲಿ ಹೇಳಲಾಗಿದೆ.
ಮನಸ್ಸಿನ ಆರೋಗ್ಯದ ಜೊತೆಗೆ ಹೃದಯದ ಆರೋಗ್ಯ ಕೂಡ ಬಹಳ ಮುಖ್ಯ. ದೇಹದ ಪ್ರತಿಯೊಂದು ಭಾಗಕ್ಕೂ ಹೃದಯ, ರಕ್ತವನ್ನು ಪಂಪ್ ಮಾಡುತ್ತದೆ. ಆಮ್ಲಜನಕವು ಇಡೀ ದೇಹಕ್ಕೆ ರಕ್ತದ ಮೂಲಕ ತಲುಪುತ್ತದೆ. ಗೊರಕೆ ಹೊಡೆಯುವ ವ್ಯಕ್ತಿ, ಹೃದ್ರೋಗದ ಅಪಾಯ ಎದುರಿಸುವ ಸಾಧ್ಯತೆಯಿದೆ. ರಕ್ತದೊತ್ತಡದ ಸಮಸ್ಯೆ ಕಾಡುವ ಸಮಸ್ಯೆಯೂ ಇದೆ.
ಗೊರಕೆ ತಲೆನೋವಿಗೆ ಕಾರಣವಾಗಬಹುದು. ಒಂದು ವೇಳೆ ತಲೆನೋವು ಬರ್ತಿದ್ದರೆ ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆಯಿರಿ. ಗೊರಕೆ ಕಾರಣಕ್ಕೆ ಸರಿಯಾಗಿ ನಿದ್ರೆ ಬರುವುದಿಲ್ಲ. ನಿದ್ರಾಹೀನತೆ ಅನೇಕ ಸಮಸ್ಯೆಗೆ ಕಾರಣವಾಗುತ್ತದೆ. ಮಾನಸಿಕ ಸಮಸ್ಯೆ ಕೂಡ ಕಾಡುತ್ತದೆ.